ADVERTISEMENT

ರಸ್ತೆಗಳಿಗೆ ಶಾಪವಾಗಿರುವ ಮರಳು ಸಾಗಣೆ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:30 IST
Last Updated 25 ಸೆಪ್ಟೆಂಬರ್ 2013, 8:30 IST

ಲಕ್ಷ್ಮೇಶ್ವರ: ಗಣಿ ದೂಳಿಗೆ ಬಳ್ಳಾರಿ ಜಿಲ್ಲೆಯ ರಸ್ತೆಗಳು ದೂಳೀಪಟವಾದರೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ರಸ್ತೆಗಳು ಅತಿ ಭಾರದ ಉಸುಕಿನ ಲಾರಿ ಗಳಿಗೆ ನಲುಗಿ ಹಾಳಾಗುತ್ತಿವೆ.

ತಾಲ್ಲೂಕಿನ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಾದ ಹೊಳೆಇಟಗಿ, ಸಾಸಲ ವಾಡ, ಕಲ್ಲಾಗನೂರು, ತೊಳಲಿ ಹಾಗೂ ಮುಂಡರಗಿ ತಾಲ್ಲೂಕಿನ ವಿಠಲಾಪುರ, ಗುಮ್ಮಗೋಳ, ಬಿದರಳ್ಳಿ, ಸಿಂಗಟಾ ಲೂರು, ಗಂಗಾಪುರ, ಶೀರನ ಹಳ್ಳಿ, ಕಕ್ಕೂರು, ಹೆಸರೂರು ಗ್ರಾಮ ಗಳಲ್ಲಿ ಮರಳು ಸಾಗಿಸುವ ದಂಧೆ ನಿರಂತರ ವಾಗಿ ವರ್ಷದ 12 ತಿಂಗಳೂ ನಡೆದೆ ಇರುತ್ತದೆ.

ತುಂಗಭದ್ರೆ ತನ್ನ ಒಡಲ ತುಂಬ ಗುಣಮಟ್ಟದ ಮರ ಳನ್ನು ತುಂಬಿ ಕೊಂಡಿದ್ದು ನಿತ್ಯ ನದಿಯ ಒಡಲನ್ನು ಬಗೆದು ಸಾವಿರಾರು ಲಾರಿ ಗಳಲ್ಲಿ ಮರಳನ್ನು ಸಾಗಿಸಲಾಗುತ್ತಿದೆ. ಶಿರ ಹಟ್ಟಿ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮರಳನ್ನು ತುಂಬಿಕೊಂಡ ಲಾರಿಗಳು ಬಳ್ಳಾರಿ ಜಿಲ್ಲೆಯ ಕಲ್ಮಲಾ–ಶಿಗ್ಗಾವಿ ರಸ್ತೆ ಮೂಲಕ ಹಾಯ್ದು ಲಕ್ಷ್ಮೇಶ್ವರ ಹೋಬಳಿಗೆ ಬಂದು ಅಲ್ಲಿಂದ ಮಂಗಸೂಳಿ–ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಬಳಸಿ ದೂರದ ಕಾರವಾರ, ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ ನಗರ ಪಟ್ಟಣಗಳಿಗೆ ಸಾಗಿಸಲ್ಪ ಡುತ್ತದೆ. ಆದರೆ ಉಸುಕಿನ ಲಾರಿಗಳು ಕನಿಷ್ಠ 20–30 ಟನ್‌ ಭಾರ ಹೊತ್ತು ಕೊಂಡು ಸಾಗುವುದ ರಿಂದ ಮಾರ್ಗ ಮಾಧ್ಯದ ರಸ್ತೆಗಳು ಆಹುತಿ ಆಗು ತ್ತಿದ್ದು ತಾಲ್ಲೂಕಿನ ಹೆಚ್ಚು ಕಡಿಮೆ ಎಲ್ಲ ಪ್ರಮುಖ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಸಂಚಕಾರ ತಂದಿವೆ. 

ಶಿರಹಟ್ಟಿ ತಾಲ್ಲೂಕಿನ ಈಗಿನ ರಸ್ತೆಗಳು ಕನಿಷ್ಠ 15–20 ಟನ್‌  ಭಾರ ಹೊರಲು ಮಾತ್ರ ಸೂಕ್ತವಾಗಿವೆ.
ಆದರೆ 30–40 ಟನ್‌ ಭಾರದ ಲಾರಿ ಗಳು ದಿನಾಲೂ ಓಡಾಡುತ್ತವೆ. ಹೀಗಾಗಿ ತಾಲ್ಲೂಕಿನ ನೂರಾರು    ಕಿಮೀ ರಸ್ತೆ ಹದಗೆಟ್ಟು ಅವು ಇದ್ದರೂ ಇಲ್ಲದಂತಾಗಿವೆ. ಇದಕ್ಕೆ ಪರಿಹಾರ ಎಂದರೆ ಹೊಸದಾಗಿ ರಸ್ತೆ ನಿರ್ಮಿಸುವಾಗ ಸರ್ವ ಋತು ರಸ್ತೆ ನಿರ್ಮಿಸುವುದು ಮಾತ್ರ.

ಆದರೆ ಈ ಕುರಿತು ಸರ್ಕಾರದ ಗಮನ ಸೆಳೆಯುವ ಜವಾ ಬ್ದಾರಿ ಶಾಸಕರಿಗೆ ಸೇರಿದ್ದು ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.