ADVERTISEMENT

`ರಾಜ್ಯದ ಘನತೆ ಮರು ಪ್ರತಿಷ್ಠಾಪನೆಗೆ 5 ವರ್ಷ ಸಾಲದು'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:00 IST
Last Updated 20 ಜುಲೈ 2013, 7:00 IST

ನರಗುಂದ: ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ರಾಜ್ಯದ ಘನತೆಗೆ ಚ್ಯುತಿಯಾಗಿದ್ದು, ಅದನ್ನು ತೊಡೆದು ಹಾಕಲು ಕಾಂಗ್ರೆಸ್‌ಗೆ ಐದು ವರ್ಷದ ಅಧಿಕಾರಾವಧಿ ಸಾಲದು ಎಂದು ಶಾಸಕ ಬಿ.ಆರ್.ಯಾವಗಲ್  ಹೇಳಿದರು.

ತಾಲ್ಲೂಕಿನ ಕೊಣ್ಣೂರಿನಲ್ಲಿ  ಗ್ರಾಮ ಪಂಚಾಯ್ತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  ಬಿಜೆಪಿಯವರು ಕಳಸಾ-ಬಂಡೂರಿ ನಾಲೆ ಜೋಡಣೆ ವಿಚಾರವನ್ನು ಅಧಿಕಾರ ಹಿಡಿಯಲು ದಾಳವಾಗಿ ಬಳಸಿಕೊಂಡರು. ಅದನ್ನು ಕಾರ್ಯಗತಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದ ಅವರು, ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಶಿವಾಚಾರ್ಯರು ಮಾತನಾಡಿ, ಜನಪ್ರತಿನಿಧಿಗಳು ಕೊಣ್ಣೂರಿಗೆ ಮಲತಾಯಿ ಧೋರಣೆ ಮಾಡದೇ ಸುವರ್ಣ ಗ್ರಾಮ ನಿರ್ಮಿಸುವಲ್ಲಿ ಸಹಕರಿಸಬೇಕು ಎಂದರು.

ಅವರಾದಿ ಫಲಹಾರೇಶ್ವರ ಸಂಸ್ಥಾನಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಅಂಜುಮನ್ ಇಸ್ಲಾಂ ಸಮಿತಿ, ವಿಶ್ವಕರ್ಮ ಸಮಾಜ, ಕುರುಬ ಸಮಾಜ, ಜೈನ ಸಮಾಜ, ಮಾದಿಗ ಸಮಾಜ, ಕೃಷಿ ಪತ್ತಿನ ಸಹಕಾರಿ ಸಂಘ, ಮಾಯಮ್ಮ ದೇವಿ ಯುವಕ ಮಂಡಳ, ಕಾಳಿದಾಸ ಯುವಕ ಮಂಡಳದವರು ಶಾಸಕರನ್ನು ಸನ್ಮಾನಿಸಿದರು.

ದೇವಾನಂದ ಚೌಡರಡ್ಡಿ, ಎಚ್.ಎನ್.ಕರಿಗೌಡ್ರ, ಶಿವಾನಂದ ಕಳಸಣ್ಣವರ, ಕೆ.ಎಚ್.ವಾಸನ, ಆರ್.ಎನ್.ಕರಿಗೌಡ್ರ, ಶಿವಾನಂದ ವಾಸನ, ಬಿಸ್ಮಿಲ್ಲಾ ಕಡಕೋಳ, ಟಿ.ಬಿ.ಶಿರಿಯಪ್ಪಗೌಡ್ರ, ಬಸಪ್ಪ ನರಗುಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.