ADVERTISEMENT

ವರುಣನಿಗೆ ಪಾರ್ಥಿಸಿ ಗುರ್ಜಿ ಆಟ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:07 IST
Last Updated 3 ಜುಲೈ 2013, 6:07 IST

ರೋಣ: ಪಟ್ಟಣದ ಆಶ್ರಯ ಕಾಲೊನಿಯ ನಿವಾಸಿಗಳು ವರುಣನಿಗಾಗಿ ಉರುಳು ಸೇವೆ, ಅನ್ನಸಂತರ್ಪಣೆ, ದ್ಯಾಮವ್ವನಗುಡಿಗೆ ಮಡಿಯಿಂದ ನೀರು ಹಾಕುವುದು ಗುರ್ಜಿ ಆಡುವುದರ ಮೂಲಕ ಗ್ರಾಮದ ದೇವರಲ್ಲಿ ಮೊರೆ ಹೋದರು.

ಪುರಸಭೆ ಸದಸ್ಯ ಖಾದೀರಸಾಬ ಸಂಕನೂರ ನೇತ್ರತ್ವದಲ್ಲಿ ಬಡಾವಣೆಯ ಜನರು ಕಳೆದ ಮೂರು ದಿನಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಚರಿಸಿ ಮಳೆ ಸುರಿದು ಕಷ್ಟದಲ್ಲಿರುವ ರೈತನ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು. ಅಲ್ಲದೇ ಗ್ರಾಮದ ವಿವಿಧ ದೇವಾಲಯಗಳಿಗೆ ಹೋಗಿ ಅಭಿಷೇಕ ಮಾಡಿಸಿದರು.

ಅನೇಕ ಪುರುಷರು ಮಹಿಳೆ ವೇಶ ತೊಟ್ಟು ಮನೆ ಮನೆ ತೆರಳಿ `ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ ಹಳ್ಳಾ ಕೊಳ್ಳ ತಿರುಗ್ಯಾಡಿ ಬಂದೆ ಬಾ ಮಳೆಯೇ ಸುರಿಮಳಿಯೇ...' ಎಂದು ಹಾಡುತ್ತ ಮನೆ ಮನೆ ತೆರಳಿ ದವಸ ,ದಾನ್ಯ , ಪಡೆದು ಅಡುಗೆ ಮಾಡಿ ಗ್ರಾಮಸ್ಥರಿಗೆ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.