ಮುಂಡರಗಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸ ಬೇಕೆಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಸ್ಥಳೀಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 11ಗಂಟೆಗೆ ತಾಲ್ಲೂಕಿನ ಹೆಸರೂರು, ಕಕ್ಕೂರ, ಕಕ್ಕೂರತಾಂಡೆ, ನಾಗರಳ್ಳಿ, ಕೊರ್ಲಹಳ್ಳಿ ಮೊದಲಾದ ಗ್ರಾಮಗಳಿಂದ ಆಗಮಿಸಿದ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಜಡಿದು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಗ್ರಾಮೀಣ ಭಾಗದ ನೀರಾವರಿ ಜಮೀನಿನ ಪಂಪ್‌ಸೆಟ್‌ಗಳಿಗೆ ನಿಯ ಮಿತವಾಗಿ ಆರು ತಾಸು ವಿದ್ಯುತ್ ಪೂರೈಸಬೇಕೆಂಬ ಸರಕಾರದ ನಿಯಮ ಗಾಳಿಗೆ ತೂರಿರುವ ಇಲ್ಲಿಯ ಅಧಿಕಾರಿ ಗಳು ತಮ್ಮ ಮನ ಬಂದಂತೆ ವಿದ್ಯುತ್ ಕಡಿತಗೊಳಿಸಿ ರೈತರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ನಾಲ್ಕು ತಾಸು ಮತ್ತು ರಾತ್ರಿ ಎರಡು ತಾಸು ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದ್ದು, ಅದರ ಹೊರತಾಗಿಯೂ ಅಧಿಕಾರಿಗಳು ತಮಗೆ ಬೇಕದಾಗಲೆಲ್ಲ ವಿದ್ಯುತ್ ಕಡಿತಗೊಳಿಸಿ ರೈತರ ಬದುಕಿನೊಡನೆ ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ 6ಗಂಟೆಯಿಂದ 12ಗಂಟೆ ಅಥವಾ ಮಧ್ಯಾಹ್ನ 12ಗಂಟೆಯಿಂದ ಸಂಜೆ 6ಗಂಟೆಯವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಪಂಪ್‌ಸೆಟ್‌ಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗ ಗಳಲ್ಲಿ ಎರಡು ಪೇಸ್ ವಿದ್ಯುತ್ ಪೂರೈಕೆ ಯಲ್ಲಿಯೂ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದು, ರಾತ್ರಿ ವಿದ್ಯುತ್ ಕಡಿತದಿಂದಾಗಿ ನೀರು ಪೂರೈಕೆಯನ್ನು ಒಳಗೊಂಡಂತೆ ಗ್ರಾಮೀಣ ಭಾಗದ ಜನರು ವಿವಿಧ ರೀತಿಯ ತೊಂದರೆಗಳನ್ನು ಅನುಭವಿ ಸುವಂತಾಗಿದೆ. ಶಾಲಾ ಕಾಲೇಜು ಮಕ್ಕಳಿಗೆ ಇದು ಪರೀಕ್ಷೆಯ ಸಮಯ ವಾಗಿದ್ದು ರಾತ್ರಿ ವಿದ್ಯುತ್ ಕೈಕೊಡುತ್ತಿ ರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.
ಮಧ್ಯಾಹ್ನ 1ಗಂಟೆಗೆ ಪ್ರತಿಭಟ ನಾಕಾರ ಬಳಿಗಾಗಮಿಸಿದ ಹೆಸ್ಕಾಂ ಅಧಿಕಾರಿಗಳು ರೈತರ ಮನ ಒಲಿಸಲು ಪ್ರಯತ್ನಿಸಿದರು. ತಮ್ಮ ಬೇಡಿಕೆಗಳು ಈಡೇರುವವರೆಗೂ ತಾವು ಕಚೇರಿ ಯನ್ನು ತೆರೆಯಲು ಬಿಡುವುದಿಲ್ಲ ಎಂದು ರೈತರು ಹಟ ಹಿಡಿದರು.
ನಂತರ ಅಧಿಕಾರಿಗಳು ಹುಬ್ಬಳಿಯ ಹಿರಿಯ ಅಧಿಕಾರಿಗಳೊಡನೆ ದೂರ ವಾಣಿಯಲ್ಲಿ ಚರ್ಚಿಸಿ ರೈತರನ್ನು ಸಮಾಧಾನ ಪಡಿಸಿದರು. ಮಾ. 22ರೊಳಗಾಗಿ ರೈತರ ಸಮಸ್ಯೆಯನ್ನು ಈಡೇರಿಸದಿದ್ದಲ್ಲಿ ಮಾ.23ರಂದು ಬಾರಕೋಲು ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದೆಂದು ಎಚ್ಚರಿಸಿದರು.
ರೈತ ಮುಖಂಡರಾದ ಶಿವಾನಂದ ಇಟಗಿ, ರಾಮು ಕಲಾಲ, ರಜನೀಕಾಂತ ದೇಸಾಯಿ, ಹೆಸರೂರು ಗ್ರಾ.ಪಂ. ಅಧ್ಯಕ್ಷ ಗುಡದಪ್ಪ ದೇಸಾಯಿ, ಸದಸ್ಯರಾದ ನಾಗರಾಜ ಗುಡಿಮನಿ, ದೀಪಲೆಪ್ಪ ದೇವರಮನಿ, ವೀರಯ್ಯ ಕಿನ್ನಾಳ, ಮುಖಂಡರಾದ ರಾಮಣ್ಣ ಗಚ್ಚಿನಮನಿ, ಚಂದ್ರಶೇಖರ ಮೋರ ನಾಳ, ಶೇಖಪ್ಪ ಪೂಜಾರ, ಪ್ರಕಾಶ ದಳವಾಯಿ, ಈಶಪ್ಪ ಮಲಶೆಟ್ಟಿ, ಈಶಪ್ಪ ದಳವಾಯಿ, ಅಂಬವ್ವ ಕಟ್ಟಿಮನಿ, ವೀರಯ್ಯ ಹಿರೇಮಠ, ಸಂಕ್ರಪ್ಪ ಜುಟ್ಲಣ್ಣವರ ಮೊದಲಾದ ವರು ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.