ADVERTISEMENT

ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 15:13 IST
Last Updated 26 ಜನವರಿ 2019, 15:13 IST
ಗದುಗಿನ ಸೈಂಟ್ ಜಾನ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಗದುಗಿನ ಸೈಂಟ್ ಜಾನ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು   

ಗದಗ: ಜಿಲ್ಲೆಯಾದ್ಯಂತ ವಿವಿಧ ಸಂಘ, ಸಂಸ್ಥೆಗಳಿಂದ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಜಹಾಂಗೀರ್ ಅಹ್ಮದ್ ಮುಳಗುಂದ, ಮಕ್ತುಂಸಾಬ್ ನಾಲಬಂದ, ಹೂವಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉಮರ್‌ಫಾರೂಕ್ ಹುಬ್ಬಳ್ಳಿ, ಅನ್ವರ್ ಶಿರಹಟ್ಟಿ, ರಾಜೇಸಾಬ್ ರೋಣದ, ಅಮೀನ ಧಾರವಾಡ, ಯೂಸುಫ್ ಶಿರಹಟ್ಟಿ, ಅಬುಬಕರ್ ಅಣ್ಣಿಗೇರಿ, ಜೀವನಸಾಬ್ ಮಂಗಳೂರ, ರಾಜು, ಮಂಜುನಾಥ, ಮಹಮ್ಮದಅಲಿ ಅತ್ತಾರ, ಸರಫರಾಜ್ ಈಟಿ, ಸಲೀಂ, ಅಬು ರಾಟಿ, ಬಾಬುಲಾಲ್ ಸವಣೂರ ಇದ್ದರು.

ಚಿಕ್ಕಟ್ಟಿ ಸಮೂಹ ಸಂಸ್ಥೆಯ ಶಾಲಾ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಸಮತಾವಾದದ ತಳಹದಿಯ ಮೇಲೆ ನಿರ್ಮಾಣವಾದ ಸಂವಿಧಾನವು ಡಾ.ಅಂಬೇಡ್ಕರ್‌ ಅವರ ಅಮೂಲ್ಯ ಕೊಡುಗೆಯಾಗಿದೆ’ ಎಂದು ವಕೀಲ ಎಫ್.ಪಿ. ಲಕ್ಷ್ಮೇಶ್ವರಮಠ ಹೇಳಿದರು.

ADVERTISEMENT

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ವೈ. ಚಿಕ್ಕಟ್ಟಿ, ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿನಯ್ ಚಿಕ್ಕಟ್ಟಿ, ಪ್ರೊ.ಬಿಪಿನ್ ಚಿಕ್ಕಟ್ಟಿ, ಪ್ರೊ.ಸ್ಪೂರ್ತಿ ಚಿಕ್ಕಟ್ಟಿ, ಪ್ರೊ.ಎಚ್.ಎಸ್. ದಳವಾಯಿ, ಶಿಕ್ಷಕ ವಿಜಯ್ ಇಟಗಿ, ಶರಣಪ್ಪ ಗುಗಲೋತ್ತರ, ಬಸವರಾಜ ಕೊಠಾಣಿ, ವಿಜಯಾ ಅಂಗಡಿ, ಕವಿತಾ ತಾಯಣ್ಣವರ, ಶೋಭಾ ಭಟ್‌ ಇದ್ದರು.

ಸಹಸ್ರ ಪತ್ತಿನ ಸಹಕಾರಿ ಸಂಘ: ಸಹಸ್ರ ಪತ್ತಿನ ಸಹಕಾರಿ ಸಂಘದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಮಾನಪ್ಪ ಬೆಣ್ಣಿಶೆಟ್ಟಿ ಅವರು ಧ್ವಜಾರೋಹಣ ನೇರವೆರಿಸಿದರು. ಅಶೋಕಕುಮಾರ ನಾವಳ್ಳಿ ಇದ್ದರು.

ಕೆ.ಎಸ್.ಎಸ್‌. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ, ಕೆ.ವಿ.ಎಸ್.ಆರ್. ಹಾಗೂ ಸಂಕೇತ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕೆಎಸ್‌ಎಸ್‌ ಸಂಸ್ಥೆಯ ಡಾ.ಬಿ.ಎಫ್. ದಂಡಿನ, ಪ್ರಾಚಾರ್ಯ ಎ.ಎ. ವೈದ್ಯ, ಪ್ರೊ.ಜಿ.ಎಂ. ಹಕಾರಿ, ಡಾ.ಟಿ.ಎನ್. ಗೋಡಿ, ಪ್ರೊ.ಸತೀಶ ಪಾಸಿ, ಪ್ರೊ.ವಿ.ಎನ್. ಮರೆಗುದ್ದಿ, ಪ್ರೊ.ಎಸ್.ಎನ್. ಜಾಲಿಹಾಳ ಇದ್ದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ: ಇಲ್ಲಿನ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವಾಣಿಜ್ಯ ಭವನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ ಧ್ವಜಾರೋಹಣ ನೆರವೇರಿಸಿದರು. ಗೌರವ ಕಾರ್ಯದರ್ಶಿ ಮಧುಸೂದನ ಪುಣೇಕರ ಇದ್ದರು.

ಬಸವೇಶ್ವರ ಕಾಲೇಜು: ‘ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕರು ಅರಿತುಕೊಂಡು ಮುನ್ನಡೆಯಬೇಕು’ ಎಂದು ಪ್ರಾಚಾರ್ಯ ಎಂ.ಎಂ. ಬುರಡಿ ಹೇಳಿದರು.

ಸ್ಥಳೀಯ ಬಸವೇಶ್ವರ ಮಹಾವಿದ್ಯಾಲಯ ಹಾಗೂ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಎಚ್.ಎಸ್. ಕಿಂದ್ರಿ, ಬಿ.ಎಸ್. ಗೌಡರ, ಪ್ರೊ.ಕೆ.ಎಸ್.ಅಣ್ಣಿಗೇರಿ, ಸಿದ್ಧಲಿಂಗಯ್ಯ ಹಿರೇಮಠ, ಬಲರಾಮ ಬಸವಾ, ಅಮರೇಶ ಅಂಗಡಿ ಇದ್ದರು.

ಸ್ನಾತಕೋತ್ತರ ಅಧ್ಯಯನ ಕೇಂದ್ರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಡಾ.ಎಸ್.ಎಫ್. ಸಿದ್ನೇಕೊಪ್ಪ, ಪ್ರೊ.ಎಸ್.ಎಲ್. ಗುಳೇದಗುಡ್ಡ ಪ್ರೊ.ಅನುರಾಧಾ ಪಾಟೀಲ, ಡಾ.ಆರ್.ಎಂ. ಕಲ್ಲನಗೌಡರ, ಡಾ.ಅಪ್ಪಣ್ಣ ಹಂಜೆ ಇದ್ದರು.

ಸೈಂಟ್ ಜಾನ್ಸ್ ಶಾಲೆ: ಇಲ್ಲಿನ ಸೈಂಟ್ ಜಾನ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಡಾ.ಫ್ರೆಡ್ಡಿ ಎ. ರಾಜ್ ಧ್ವಜಾರೋಹಣ ನೆರವೇರಿಸಿದರು. ಉಷಾ ಕರಿಬಿಷ್ಠಿ, ಶಿರಿನಂತಾಜ್ ಸರಖವಾಸ, ಅಂಜುಮಕೌಸರ ದೊಡ್ಡಮನಿ, ವಂದನಾ ರೇವಣಕರ, ಆ್ಯಂಡ್ರು ಆಳ್ವಾ, ಮುಖ್ಯಶಿಕ್ಷಕಿ ಮೇರಿ ಮಸ್ಕರೇನಸ್‌, ಸಿಂಚನಾ ಶಟವಾಜಿ, ಸಂಗೀತಾ ಗಾರ್ಗಿ, ಶಿಕ್ಷಕಿ ಗೀತಾ ಎಚ್, ಶಿಕ್ಷಕ ಎಲ್.ಪಿ. ಕಟ್ನಳ್ಳಿ, ಗಣೇಶಸಿಂಗ್ ದೊಡ್ಡಮನಿ, ಶಿಕ್ಷಕಿ ಜೆಸಿಂತಾ ಯಮ್ಮಿ ಇದ್ದರು.

ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ ಧ್ವಜಾರೋಹಣ ನೆರವೇರಿಸಿದರು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಎಂ. ಮೂಲಿಮನಿ, ಡಿ.ಎಸ್. ನಾಯಕ, ಐ.ಎಸ್. ಅಂಗಡಿ, ಉಪನ್ಯಾಸಕ ಕೆ.ವಿ. ಕುಂದಗೋಳ, ಪ್ರಾಚಾರ್ಯ ಎ.ಎ. ಹದ್ಲಿ, ತುಳಸಿ ತಟ್ಟಿ ಇದ್ದರು.

ಉಪ ನೋಂದಣಾಧಿಕಾರಿ ಕಚೇರಿ: ಇಲ್ಲಿನ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಣಾಧಿಕಾರಿ ಸಂಜಿದಾ ಪಿಂಜಾರ ಅವರು ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಗೋಪಾಲ ಬೆಳ್ಳಿಕೇರಿ, ಪ್ರಭು ಭಜಂತ್ರಿ, ದೀಪಾ, ಹೇಮಾವತಿ, ಬಸವರಾಜ, ಗೂಳಪ್ಪ, ಪ್ರವೀಣ, ಅಶೋಕ ಕಣಗಿನಹಾಳ, ಕೋರಿಮಠ, ಗಾಳಪ್ಪನವರ ಇದ್ದರು.

ಬೆಟಗೇರಿ ಟೆಂಗಿನಕಾಯಿ ಬಜಾರ ವ್ಯಾಪಾರಸ್ಥ ಸಂಘದಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಳಮಕರ್, ಕಾರ್ಯದರ್ಶಿ ರಾಜಣ್ಣ ತ್ರಿಮಾಲೆ, ಜ್ಞಾನೇಶ ಖೋಕಲೆ, ವೆಂಕಟೇಶ್ ಜಿತೂರಿ, ಮಂಜುನಾಥ ಪೂಜಾರ, ಅಬ್ಬು ವರ್ಕರ್, ಬೆಂತೂರ ರಾಮಣ್ಣ, ಪಂಪಣ್ಣ ಬೆಂಗಳೂರ, ವಿಠ್ಠಲ, ಸುಭಾಷ ಕಾಂಬ್ಳೆಕರ್ ಇದ್ದರು.

ಮರ್ಚಂಟ್ಸ್ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ನಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಎಸ್.ಜಿ. ಅರಮನಿ, ಕೆ.ಎಸ್. ಚೆಟ್ಟಿ ಇದ್ದರು.

ಸರಾಫ್ ಬಜಾರ್‌ನಲ್ಲಿ ಸರಾಫ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಡಾ.ಕಲ್ಲೇಶ ಮೂರಶಿಳ್ಳಿನ, ಅರುಣ ವೆರ್ಣೇಕರ, ನಾಗರಾಜ ಮೇರವಾಡೆ, ಸಿದ್ಧಲಿಂಗೇಶ ಮೂರಶಿಳ್ಳಿನ, ಅರುಣ ಜೈನ, ಪ್ರವೀಣ ಕಾಟವಾ, ಕೆ.ವೈ. ಖಟವಟೆ, ಅಮೀತ ಖಟವಟೆ, ಪ್ರಕಾಶ ಭಾಂಡಗೆ, ಮಂಜುನಾಥ ಪಾಲನಕರ, ಪರಶುರಾಮ ಖಟವಟೆ, ರಾಘು ರೇವಣಕರ, ಕಿರಣ ಭೂಮಾ, ನಾಗರಾಜ ಹುಬ್ಬಳ್ಳಿ, ಮೋಹನ ಪವಾರ ಇದ್ದರು.

ವಿಜಯ ಕಲಾಮಂದಿರ: ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ತೊಂಟದಾರ್ಯ ಕಲ್ಯಾಣ ಮಂಟಪದ ಎದುರು ವಿಜಯ ಕಲಾ ಮಂದಿರದಿಂದ ವಿದ್ಯಾರ್ಥಿಗಳ ಹಾಗೂ ಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ ನಡೆಯಿತು. ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ ಉದ್ಘಾಟಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಮಾಂತೇಶ ಬಾತಖಾನಿ, ವಸಂತ ಅಕ್ಕಿ, ಅಶೋಕ ಅಕ್ಕಿ, ಪ್ರಕಾಶ ಅಕ್ಕಿ, ಅನಿಲ ಶಿಂಗಟಾಲಕೇರಿ, ಮಂಜುಳಾ ರಾನಡೆ, ಅಮೃತಾ ಪಾಟೀಲ, ಶಿವಲೀಲಾ ಅಕ್ಕಿ, ವಿಲ್ಸನ್ ಸೋನಘರ, ವಿ.ಬಿ. ಪರ್ವವತಗೌಡರ ಭಾಗವಹಿಸಿದ್ದರು.

ರವಿ ಬಡಿಗೇರ, ಸುಮನ ಬೆಣಗಿ, ಕಾಳಪ್ಪ ಬಡಿಗೇರ, ಬಸು ಬಾರಕೇರ, ಗೀತಾ ನಾರಾಯಣಕರ್, ಮಹಾದೇವ ಆಳಣ್ಣವರ, ಮಲ್ಲಿಕಸಾಬ್ ನದಾಫ, ಜಯಶ್ರೀ ಬಾಕಳೆ, ಶರಣಪ್ಪ ಮಾದರ, ಅಮೃತ ಮೊರಬದ, ಸಂಗಮೇಶ ಕಳಸದ, ಪ್ರಾಚಾರ್ಯ ಆರ್.ಡಿ. ಕಡ್ಲಿಕೊಪ್ಪ, ಶರಣಪ್ಪ ಬಿ.ಎಚ್, ಶಶಿಕಲಾ ಕಮ್ಮಾರ ಇದ್ದರು.

ಮಂಜು ಶಾಲೆ: ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಮಂಜು ಪ್ರೌಢಶಾಲೆ ಹಾಗೂ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಂಕರಸಿಂಗ್ ರಜಪೂತ, ವಿನಾಯಕಸಿಂಗ್ ರಜಪೂತ, ಮುಖ್ಯಶಿಕ್ಷಕಿ ಜಯಶ್ರೀ ಡಿಸೋಜಾ, ಲಕ್ಷ್ಮೀ ಮುಳ್ಳಾಳ, ತಸ್ಮೀಯಾ ಮುಳಗುಂದ, ಲಕ್ಷ್ಮೀ ಮುಳ್ಳಾಳ, ಶಿಲ್ಪಾ ಹರ್ಲಾಪೂರ, ಅನಿತಾ ಕೋಪರ್ಡೆ, ಸಾವಿತ್ರಿ ಜಡೆನ್ನವರ ಇದ್ದರು.

ದಲಿತ ಸಂಘರ್ಷ ಸಮಿತಿ: ಇಲ್ಲಿನ ಆದಿಜಾಂಬವ ನಗರದ ಮ್ಯಾಗೇರಿ ಓಣಿಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕೆಂಚಪ್ಪ ಹಾದಿಮನಿ, ಫಕ್ಕೀರಪ್ಪ ಹಾದಿಮನಿ, ಯಲ್ಲಪ್ಪ ಮೇಲಿನಮನಿ, ಯಲಪ್ಪ ನಡಗೇರಿ, ಸಿದ್ದು ಹಾದಿಮನಿ, ಸಿದ್ದಪ್ಪ ಹಾದಿಮನಿ, ಪ್ರವೀಣ ಹಾದಿಮನಿ, ಪ್ರಕಾಶ ಹೊಸಳ್ಳಿ, ಮುತ್ತು ಹೊಸಳ್ಳಿ, ಮಣಿಕಂಠ ಹಾದಿಮನಿ, ವಿಶ್ವನಾಥ ಮಣ್ಣಮ್ಮನವರ, ಸಂತೋಷ ಮಣ್ಣಮ್ಮನವರ ಇದ್ದರು.

ಬಾಲ ವಿನಾಯಕ ವಿದ್ಯಾನಿಕೇತನ: ಇಲ್ಲಿನ ಸಂಭಾಪೂರ ರಸ್ತೆಯಲ್ಲಿರುವ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಆರ್. ವಸಂತಕುಮಾರಿ ಅವರು ಧ್ವಜಾರೋಹಣ ನೆರವೇರಿಸಿದರು. ಕಂಪ್ಯೂಟರ್ ಸೈನ್ಸ್ ಅಂಕ ಪಡೆದವರಿಗೆ ಹಾಗೂ ಶುಭಾಷಣ, ರಸಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್. ರವಿ, ಮಲ್ಲಿಕಾ ಆರ್, ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪ ಪ್ರಾಚಾರ್ಯ ಆರ್. ವಿನಾಯಕ, ಹರ್ಷಾ ಮಡಿವಾಳರ, ಸಂಯುಕ್ತಾ ಕುಲಕರ್ಣಿ, ಅನುಷಾ ಮೇಟಿ, ರಾಧಾ ಜಂಗಲ್, ಸ್ನೇಹ ಐರೋಡಗಿ, ಸಂಜನಾಕ್ಷಯ ಕುರ, ಟಿ.ನರಸಿಂಹನಾಯ್ಡು, ವರ್ಷಾ ಪಾಟೀಲ ಇದ್ದರು.

ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು: ‘ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಪ್ರಾಚಾರ್ಯ ಡಾ.ಎಂ.ಎಂ. ಅವಟಿ ಹೇಳಿದರು.

ಇಲ್ಲಿನ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಡಿ.ಎಂ. ಗೌಡರ, ಪ್ರೊ.ಶಿವಯೋಗಿ ಪಾಟೀಲ, ದೈಹಿಕ ನಿರ್ದೇಶಕ ಸಿದ್ದು ಅಂಗಡಿ, ವಿಜಯಕುಮಾರ ಮಾಲಗಿತ್ತಿ, ಪ್ರವೀಣ ಜ್ಯೋತಿ, ಸುನಿಲ ಪಾಟೀಲ, ಸುಜಾತಾ ಭಾವಿಕಟ್ಟಿ ಇದ್ದರು.

ಕೆಎಲ್‌ಇ ಸಂಸ್ಥೆ: ನಗರದ ಕೆ.ಎಲ್‌.ಇ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪ್ರಾಚಾರ್ಯ ಪ್ರೊ.ಎಂ.ಬಿ. ಕೊಳವಿ ಧ್ವಜಾರೋಹಣ ನೆರವೇರಿಸಿದರು. ಡಾ.ಎ.ವಿ. ದೇವಾಂಗಮಠ, ಪ್ರೊ.ವೀಣಾ ತಿರ್ಲಾಪುರ, ನಿವೇದಿತಾ ಬುಳ್ಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.