ADVERTISEMENT

ವೃದ್ಧಾಪ್ಯ ವೇತನ ಸ್ಥಗಿತ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:05 IST
Last Updated 2 ಅಕ್ಟೋಬರ್ 2012, 5:05 IST
ವೃದ್ಧಾಪ್ಯ ವೇತನ ಸ್ಥಗಿತ: ಪ್ರತಿಭಟನೆ
ವೃದ್ಧಾಪ್ಯ ವೇತನ ಸ್ಥಗಿತ: ಪ್ರತಿಭಟನೆ   

ಗದಗ: ಸ್ಥಗಿತಗೊಳಿಸಿರುವ ವೃದ್ಧಾಪ್ಯ ವೇತನವನ್ನು ನೀಡಬೇಕು ಎಂದು ಆಗ್ರಹಿಸಿ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟದ ನೇತೃತ್ವದಲ್ಲಿ ಹೊಂಬಳ, ಗದಗ, ಬೆಟಗೇರಿಯ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

3-4 ತಿಂಗಳಿನಿಂದ ಪಿಂಚಣಿ ನೀಡು ತ್ತಿಲ್ಲ. ಹಿಂದಿನ ಪಟ್ಟಿಯಿಂದ ಕೈ ಬಿಡ ಲಾದ ಫಲಾನುಭವಿಗಳಿಗೆ ಮತ್ತೆ ಅರ್ಹತೆ ನೀಡಬೇಕು, 70-80 ವರ್ಷ ವಯಸ್ಸಾದವರನ್ನು ಸಮರ್ಪಕ ತನಿಖೆ ನಡೆಸದೆ ಪಿಂಚಣಿ ಪಟ್ಟಿಯಿಂದ  ಕೈ  ಬಿಡಲಾಗಿದೆ. ಅನರ್ಹರೆಂದು ಖಚಿತ ಪಡಿಸಿಕೊಳ್ಳುವವರೆಗೂ   ಪಿಂಚಣಿ ನೀಡಬೇಕು. ಪಿಂಚಣಿದಾರರ  ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಮೂಲ ಪಿಂಚಣಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಯಾಗ ಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ತುಟ್ಟಿ ಭತ್ಯೆ ನೀಡಬೇಕು. ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಿ ಪಿಂಚಣಿ ಯನ್ನು ಹಕ್ಕಾಗಿ ಮಾಡಲು         ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.