ADVERTISEMENT

ವೈದ್ಯರು ರೋಗಿಗೆ ದೇವರಿದ್ದಂತೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 4:55 IST
Last Updated 24 ಸೆಪ್ಟೆಂಬರ್ 2011, 4:55 IST

ಮುಂಡರಗಿ: `ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರನ್ನು ದೇವರೆಂದು ಭಾವಿಸಲಾ ಗುತ್ತಿದೆ. ಆದ್ದರಿಂದ ವೈದ್ಯರು ಪ್ರಾಮಾಣಿಕವಾಗಿ ರೋಗಿಗಳ ಸೇವೆಮಾಡಿ ಅವರ ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ತುಂಬಬೇಕು~ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಚೆಗೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ತ್ಯಾಗ ಹಾಗೂ ಸೇವಾ ಗುಣಗಳು ಇರಬೇಕಾದದ್ದು ತುಂಬಾ ಅಗತ್ಯ. ಅಂತಹ ಗುಣಗಳಿದ್ದ ವೈದ್ಯರಿಗೆ ಸಮಾಜದಲ್ಲಿ ಹಾಗೂ ರೋಗಿಗಳಲ್ಲಿ ತುಂಬಾ ವಿಶ್ವಾಸವಿರುತ್ತದೆ. ಅಪಾರ ಪ್ರಮಾಣದ ಹಣ ಖರ್ಚು ಮಾಡಿ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವವರು ನಿಸ್ವಾರ್ಥದಿಂದ ರೋಗಿಗಳ ಸೇವೆ ಮಾಡಿ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಬೇಕು~ ಎಂದು ಅವರು ಸಲಹೆ ನೀಡಿದರು.

ವೈದ್ಯರಾದವರು ನಿತ್ಯ ಅಧ್ಯಯನದಲ್ಲಿ ತೊಡಗುವ ಮೂಲಕ ವೈದ್ಯಕೀಯ ತೊಡಗಿಕೊಂಡು ಹೊಸ ಆವಿಷ್ಕಾರ ಗಳನ್ನು ಪರಿಚಯಿಸಿ ಕೊಳ್ಳುತ್ತಿರಬೇಕು.  ಎಂದದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಜಿ.ಬಿ.ಬೀಡನಾಳ ತಿಳಿಸಿದರು.

`ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ತೀರಾ ಹದಗೆಟ್ಟು ಹೋಗಿರುವ ಮುಂಡರಗಿ- ಕೊರ್ಲಹಳ್ಳಿ ರಸ್ತೆಯನ್ನು ತಕ್ಷಣ ದುರ ಸ್ತಿಗೊಳಿಸಬೇಕು~ ಎಂದು ಜಿಲ್ಲಾ ಪಂಚಾ ಯಿತಿ ವಿರೋಧ ಪಕ್ಷದ ನಾಯಕ ಹೇಮ ಗಿರೀಶ ಹಾವಿನಾಳ ಒತ್ತಾಯಿಸಿದರು.

ಐಎಂಎ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಾಣಿ ಶಿವಪೂರ ಸಮಾರಂಭದ ಅಧ್ಯ ಕ್ಷತೆ ವಹಿಸಿಕೊಂಡಿದ್ದರು. ವೈ.ಎನ್.ಗೌಡರ ಮತ್ತಿತರರು ಮಾತನಾಡಿದರು. ಡಾ.ದಿನೇಶ ದೇಸಾಯಿ, ಡಾ.ಅನಂತ ಶಿವಪೂರ, ಡಾ.ವೈ.ಎಸ್.ಮೇಟಿ, ಡಾ.ಎಂ.ಎಂ.ಸೋಲಾಪುರೆ, ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಅಂಕದ, ಪುರಸಭೆ ಅಧ್ಯಕ್ಷೆ ರಿಹಾನಾ ಬೇಗಂ ಕೆಲೂರ, ಶಿವನಗೌಡ್ರ ಗೌಡ್ರ, ಸಿ.ಕೆ. ಗಣಪ್ಪನವರ, ಡಾ.ಪಿ.ಬಿ. ಹೊಸ ಮನಿ, ಡಾ.ಎಚ್.ಹನುಮೇಶ, ರಾಜ ಶೇಖರ ರಾಠೋಡ ಹಾಜರಿದ್ದರು.

ಡಾ.ಪಿ.ಬಿ.ಹೊಸಮನಿ ಸ್ವಾಗತಿಸಿ ದರು. ಡಾ.ಅನ್ನದಾನಿ ಮೇಟಿ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಎಸ್.ಎಸ್.ಸರ್ವದೆ  ನಿರೂಪಿಸಿದರು. ಡಾ.ಸುರೇಶ ಹೊಸಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.