ADVERTISEMENT

`ಸಂಸ್ಕೃತದಲ್ಲಿ ಸಂಶೋಧನೆ ಕೈಗೊಳ್ಳಿ'

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 11:28 IST
Last Updated 7 ಜುಲೈ 2013, 11:28 IST

ಗದಗ: ನಗರದ ತೋಂಟದಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ನಿವೃತ್ತರಾದ ಮುಖ್ಯಾಧ್ಯಾಪಕ ಎನ್.ಎನ್.ಭಟ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ನಿವೃತ್ತ ಆಂಗ್ಲ ಉಪನ್ಯಾಸಕ ಪ್ರೊ. ವಿಜಯಮಹಾಂತ ದೇವರು ಮಾತನಾಡಿ, ಎನ್.ಎನ್.ಭಟ್ ಗುರುಗಳು  ಎಲ್ಲ ವಿದ್ಯಾರ್ಥಿಗಳನ್ನು ಮಕ್ಕಳಂತೆ  ನೋಡಿಕೊಂಡು ಸಂಸ್ಕೃತ ಕಲಿಸಿದ್ದಾರೆ.  ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಕರಿಗೆ ಹೆಚ್ಚಿನ ಅನುಕೂಲತೆಗಳು ದೊರೆಯಲಿ. ಭಟ್ ಗುರುಗಳಿಂದ ಸಂಸ್ಕೃತ ಕ್ಷೇತ್ರಕ್ಕೆ ಇನ್ನೂ ಮಾರ್ಗದರ್ಶನ ದೊರೆಯಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಜಿ.ಅಣ್ಣಿಗೇರಿ ಗುರು, ಸಂಸ್ಕೃತ ಆಗದವರು ಸಂಸ್ಕೃತವನ್ನು ಮಾತೃಭಾಷೆ ಎಂದು ಜರಿದಿದ್ದಾರೆ. ಭಟ್‌ರು ಮತ್ತು ಶಿಷ್ಯರು ಸಂಸ್ಕೃತ ಮಾತನಾಡುವ ಮೂಲಕ ಮಾತು ಸುಳ್ಳು ಮಾಡಿದ್ದಾರೆ. ಇದು ನಿಜವಾಗಿಯೂ ದೊಡ್ಡ ಕೆಲಸ. ಸಂಸ್ಕೃತ ಭಾಷೆಯಲ್ಲಿ ಅಪಾರ ಜ್ಞಾನ ಸಂಪತ್ತು ಅಡಗಿದೆ. ನಿವೃತ್ತಿ ನಂತರ ಭಟ್‌ರು  ಸಂಸ್ಕೃತದಲ್ಲಿ ಸಂಶೋಧನೆ ಕೈಕೊಳ್ಳಬೇಕು ಎಂದರು.

ಪ್ರಭಾರ ಮುಖ್ಯಾಧ್ಯಾಪಕ ಎಸ್.ವ್ಹಿ.ಹಿರೇಮಠ ಮಾತನಾಡಿ, ಭಟ್ ಗುರುಗಳೊಂದಿಗೆ ಸೇವೆ ಸಲ್ಲಿಸಿದ ಮಧುರ ಕ್ಷಣ,  ಶಾಲಾ ಪ್ರಗತಿ ಚಿಂತನೆ ಮತ್ತು ಸೌಹಾರ್ದತೆ ಸ್ಮರಿಸಿದರು. ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಾದ ಪಂಚಯ್ಯ ಮತ್ತು ಪರಮೇಶ್ವರ ಮಠದ ಅನುಭವ ಹಂಚಿಕೊಂಡರು.

ಡಿ.ಜಿ.ಎಂ. ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕಿ ಡಿ.ಆರ್.ದೇಶಪಾಂಡೆ, ಜಿ.ಎಸ್.ಗಾಂವಕರ, ಬಿ.ಎಸ್. ಬಣಕಾರ, ಎಸ್.ಎಸ್.ಬಣಕಾರ, ಎಂ.ಎಸ್.ಅಂಗಡಿ, ಪಿಪಿಜಿ. ಶಾಲೆಯ ಪಿ.ಎಫ್.ಹಿರೇಮಠ, ಕಾಶಿ ಪಾಠಶಾಲೆಯ ಗುರುಸಿದ್ದಯ್ಯ ಹಿರೇಮಠ , ಶಂಭುಲಿಂಗಯ್ಯ ಹಾಜರಿದ್ದರು. ಶಿಕ್ಷಕ ಎಸ್.ಎಸ್.ನೀಲಗುಂದ ನಿರೂಪಿಸಿದರು. ಎಸ್.ಎನ್.ಶಿಂಪಿಗೇರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.