ADVERTISEMENT

ಸೂಕ್ತ ಸ್ಮಶಾನ ಜಾಗ ಗುರುತಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:18 IST
Last Updated 18 ಜೂನ್ 2013, 11:18 IST

ರೋಣ: ಗ್ರಾಮದ ಪರಿಶಿಷ್ಟ ಪಂಗಡ ಕಾಲೊನಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಸ್ಮಶಾನ ನಿರ್ಮಿಸಲು ಉದ್ದೇಶಿಸಿರುವುದನ್ನು ಕೈಬಿಟ್ಟು, ಹೊರ ವಲಯದ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಜಾಗದಲ್ಲಿ ಸ್ಮಶಾನ ನಿರ್ಮಿಸಬೇಕು. ಸಾರ್ವಜ ನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಸ್ಮಶಾನ ಇರಕೂಡದು ಎಂದು ಆಗ್ರಹಿಸಿ ತಾಲ್ಲೂಕಿನ ಶಾಂತಗೇರಿ ಗ್ರಾಮದ ಪರಿಶಿಷ್ಟ ಪಂಗಡ ಕಾಲೊನಿ ನಿವಾಸಿಗಳು ಸೋಮವಾರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈಗಾಗಲೇ ಸ್ಮಶಾನಕ್ಕೆ ಗುರುತಿಸ ಲಾದ ಗ್ರಾಮದ ಹತ್ತಿರವಿರುವ ಜಾಗವು ಖಾಸಗಿ ಅವರಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಅದು ಕಾಲೊನಿಗೆ ಹೊಂದಿ ಕೊಂಡಿದ್ದರಿಂದ ಇಲ್ಲಿ ಶವ ಸುಡುವುದಾ ಗಲಿ, ಉಳುವುದಾಗಲಿ ಮಾಡಿದ್ದಲ್ಲಿ ವಾಸನೆ ಬರುತ್ತದೆ.

ಶವ ಸುಡುವಾಗ ಅದರ ಹೊಗೆಯು ಮನೆಯೊಳಗೆ ಬರು ತ್ತದೆ. ಮನೆಯಲ್ಲಿ ನಿಂತರೆ  ಸ್ಮಶಾನ ಕಾಣುವುದರಿಂದ ಶವ ಶಂಸ್ಕಾರ ಮಾಡುವುದನ್ನು ಚಿಕ್ಕಮಕ್ಕಳು ನೋಡಿ ದಲ್ಲಿ ಭಯ ಬಿಳುತ್ತಾರೆ.

ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ತಹಶೀಲ್ದಾ ರ್‌ರು ಸ್ಥಾನಿಕ ಚೌಕಾಶಿ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಗ್ರಾಮದ ಹತ್ತಿರದ ಗುಡ್ಡದಲ್ಲಿ ಸಾಗುವಳಿ ಮಾಡದೇ ಇರುವ  ಸರ್ಕಾರಿ ಜಾಗೆ ಇದೆ ಅಲ್ಲಿ ವ್ಯವಸ್ಥಿತ ರುದ್ರ ಭೂಮಿ ಕಲ್ಪಿ ಸಿದ್ದಲ್ಲಿ ಯಾವುದೇ ಅಡಚಣೆ ಬರುವು ದಿಲ್ಲ. ಈಗಿದ್ದ ಖಾಸಗಿ ಅವರ ಜಮೀನು ಸಾಗುವಳಿಗೆ ಯೋಗ್ಯವಾಗಿದೆ. ಆದ್ದ ರಿಂದ ಸ್ಥಳೀಯ ಗ್ರಾ.ಪಂ ಕೈಗೊಳ್ಳುವ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಬಿ.ಪಾಟೀಲ ಮಾತನಾಡಿ, ಈಗಾ ಗಲೇ ಗ್ರಾಮಕ್ಕೆ ಭೇಟಿ ನೀಡಿ ಜಾಗೆ ಯನ್ನು ಪರಿಶೀಲಿಸಲಾಗಿದೆ. ಹಾಗೂ ಗ್ರಾಪಂಗೆ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಂಡ ಠರಾವು ಮಾಡಲು ತಾಪಂ ಇಓ ಸೂಚನೆ ನೀಡಿದ್ದಾರೆ. ಯಾವು ದಕ್ಕೂ ಸ್ಥಾನಿಕ ಚೌಕಾಶಿ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಸ್ಮಶಾ ನಕ್ಕೆ ಯಾವ ಜಾಗೆ ಸೂಕ್ತ ಎಂಬುದನ್ನು ಗ್ರಾಪಂನವರು ನಿರ್ಧರಿಸುತ್ತಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್.ಪಿ.ಹಟ್ಟಮನಿ, ಎಸ್.ಎಚ್. ಹುಲ್ಲನ್ನವರ, ರಂಗಪ್ಪ ಹಟ್ಟಿಮನಿ, ಹನಮಂತಪ್ಪ ಹಟ್ಟಮನಿ, ಮಂಜುನಾಥ ಹಟ್ಟಿಮನಿ, ಶಾಂತಪ್ಪ ಪಿಳಿಬಂಟರ, ಶಿದ್ದಪ್ಪ ಹುಲ್ಲನ್ನವರ, ಬಸವರಾಜ ನಾಯಕ, ಶ್ರೀಧರ ತಳವಾರ, ಶೇಖಪ್ಪ ಕುರಟ್ಟಿ, ಲಕ್ಷ್ಮಣ್ಣ   ಪಿಳಿ ಬಂಟರ, ಮುತ್ತಪ್ಪ ಹುಲ್ಲನ್ನವರ, ಫಕೀರಪ್ಪ ಹಟ್ಟಿಮನಿ, ಶರಣಪ್ಪ ಹಟ್ಟಿಮನಿ, ಯಮನೂರಪ್ಪ ವಡ್ಡರ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.