ADVERTISEMENT

ಹಡಗಲಿಯಲ್ಲಿ ಗ್ರಾಮ ಸಭೆ: ಮೂಲಸೌಕರ್ಯ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:33 IST
Last Updated 1 ಜುಲೈ 2013, 6:33 IST

ರೋಣ: ತಾಲ್ಲೂಕಿನ ಯಾವಗಲ್ ಹಾಗೂ ಯಾ.ಸ ಹಡಗಲಿ ಗ್ರಾಮ ಸಭೆಯಲ್ಲಿ ಕುಡಿಯುವ ನೀರು, ಬೀದಿ ದೀಪ, ಪಡಿತರ ಚೀಟಿ, ರಸ್ತೆ, ಗಟಾರ, 2012-13 ನೇ ಸಾಲಿನ ಫಲಾನುಭವಿಗಳ ಆಯ್ಕೆ ಹಾಗೂ ವಿವಿಧ ಕಾಮಗಾರಿಗಳ ವಿಷಯದ ಬಗ್ಗೆ ಚರ್ಚೆ ನಡೆದವು.

ಮನೆ ನೀಡಲು ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ  ವ್ಯಕ್ತ ಪಡಿಸಿದರು. ನಂತರ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ ಸಮಾಧಾನ ಪಡಿಸಿದರು.

ಸಭೆಯಲ್ಲಿ ಮೊಕಾಶಿ, ಸಿದ್ದಯ್ಯ ಹಿರೇಮಠ, ಕಲ್ಲಪ್ಪ ರೋಣದ, ಶರಣಪ್ಪ ಜೈನರ್, ಮುತ್ತಪ್ಪ ಕಾರಡ್ಡಿ, ಶಿವು ಸುಣಗಾರ, ರೋಜನಬಿ ಬೋದ್ಲೇಖಾನ, ಮುತ್ತವ್ವ ಕೊಂಗವಾಡ, ಪಿಡಿಓ ಎಸ್.ಎಮ್.ಬಡಿಗೇರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.