ADVERTISEMENT

‘ಅದಿರು ವಶಪಡಿಸಿಕೊಂಡಿದ್ದು ಹೇಗೆ?’

ಡಿಎಫ್‌ಓಗೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:31 IST
Last Updated 17 ಸೆಪ್ಟೆಂಬರ್ 2013, 5:31 IST

ಗದಗ: ‘ಕಪ್ಪತ್ತಗುಡ್ಡ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವ ಬಗ್ಗೆ ತನಿಖಾಧಿಕಾರಿ ವರದಿ ನೀಡಿದಾ್ದರೆ. ಗಣಿಗಾರಿಕೆ ಬಂದ್‌ ಆಗಿದೆ ಎಂದು ಹೇಗೆ ಹೇಳುತ್ತೀರಿ’?

ನಗರದ ವಿವೇಕಾನಂದ ಸಭಾಂಗಣದಲಿ್ಲ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಸಿ್ವೀಕಾರ ಮತು್ತ ಅರ್ಜಿ ವಿಚಾರಣೆಯಲಿ್ಲ ಲೋಕಾಯುಕ್ತ ನಾ್ಯಯಮೂರ್ತಿ ವೈ. ಭಾಸ್ಕರ್‌ ರಾವ್‌ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್‌. ಅಘೋರೆ ಅವರನು್ನ ಪ್ರಶಿ್ನಸಿದು್ದ ಹೀಗೆ.

2008ರಲಿ್ಲ ‘ಪ್ರಜಾವಾಣಿ’ ಪ್ರಕಟಿಸಿದ ‘ಕಪ್ಪತ್ತಗುಡ್ಡಕೆ್ಕ ಲಗೆ್ಗ ಇಟ್ಟ ಗಣಿ ಭೂತ’ ವರದಿ ಆಧರಿಸಿ ತನಿಖೆ ನಡೆಸಿದ ಅಧಿಕಾರಿ ಕಪ್ಪತ್ತಗುಡ್ಡ ಸುತ್ತಮುತ್ತಲ ಪ್ರದೇಶದಲಿ್ಲ ಗಣಿಗಾರಿಕೆ ನಡೆದಿರುವ ಕುರಿತು ವರದಿ ಸಲಿ್ಲಸಿದಾ್ದರೆ. ಇದಕೆ್ಕ ಏನು ಕ್ರಮ ಕೈಗೊಂಡಿದೆ್ದೀರಿ ಎಂಬ ಪ್ರಶೆ್ನಗೆ ಉತ್ತರಿಸಿದ ಡಿಎಫ್‌ಓ ಅಘೋರೆ, ‘2002ರಲಿ್ಲಯೇ ಗಣಿಗಾರಿಕೆ ಬಂದ್‌ ಆಗಿದೆ. ಜೋರು ಮಳೆ ಬಂದ ಸಂದರ್ಭದಲಿ್ಲ ತೋಯು್ದ ಕೊಂಡು ಬಂದ 30 ಸಾವಿರ ಟನ್‌ ಕಬಿ್ಬಣದ ಅದಿರನು್ನ ಸಂಗ್ರಹಿಸಲಾಗಿತು್ತ. ಟೆಂಡರ್‌ ಕಂ ಹರಾಜಿನ ಮೂಲಕ ಅದರಲಿ್ಲ 17 ಸಾವಿರ ಟನ್‌ ಮಾರಾಟ ಮಾಡಲಾಗಿದೆ. ಉಳಿದ 12 ಸಾವಿರ ಟನ್‌ ಅದಿರನು್ನ ಸಾಗಣೆ ಮಾಡಲು ಅನುಮತಿ ಪಡೆಯಲಾಗಿದೆ. ತೂಕದಲಿ್ಲ ವ್ಯತಾ್ಯಸ ಆಗಬಾರದು ಎಂಬ ಕಾರಣಕೆ್ಕ ವೇಬಿ್ರಡ್ಜ್‌, ಕಾ್ಯಮೆರಾ ಅಳವಡಿಸಲಾಗಿತು್ತ’ ಎಂದು ತಿಳಿಸಿದರು.

‘ಅಕ್ರಮ ಗಣಿಗಾರಿಕೆ ನಡೆಯದಿದ್ದರೆ ಕಬಿ್ಬಣದ ಅದಿರು ಹೇಗೆ ವಶಪಡಿಸಿಕೊಂಡಿ್ರ, ತನಿಖಾ ವರದಿಯ ಬಗೆ್ಗ ಮಾಹಿತಿ ಇದೆಯೇ ಎಂದು ನಾ್ಯಯಮೂರ್ತಿ ಪ್ರಶಿ್ನಸಿದಾಗ, ಇಲ್ಲ ಎಂದು ಅಘೋರೆ ಉತ್ತರಿಸಿದರು. ತನಿಖಾಧಿಕಾರಿಯ ವರದಿ ಪ್ರತಿಯನು್ನ ಪಡೆದುಕೊಂಡು ಕ್ರಮ ಕೈಗೊಳು್ಳವಂತೆ ಡಿಎಫ್‌ಒಗೆ ಸೂಚಿಸಿದರು.

‘ಶಾಲಾ, ಕಾಲೇಜು ಸಮೀಪ 200 ಮೀಟರ್‌ ವಾ್ಯಪಿ್ತಯಲಿ್ಲ  ಬಾರ್‌, ವೈನ್‌ಸ್ಟೋರ್‌ಗೆ ಅನುಮತಿ ನೀಡಬಾರದು ಎಂಬ ನಿಯಮವಿದ್ದರೂ ವೈನ್‌ಸ್ಟೋರ್‌ಗೆ ಅನುಮತಿ ನೀಡಲಾಗಿದೆ. ಕಾಲೇಜಿಗೆ ಹೋಗುವಾಗ ಕುಡುಕರು ಚುಡಾಯಿಸುತಾ್ತರೆ. ಇದರಿಂದ ಹೆಣು್ಣ ಮಕ್ಕಳು ರಸೆ್ತಯಲಿ್ಲ ಓಡಾಡಲು ತೊಂದರೆಯಾಗಿದೆ’ ಎಂದು ಬಸವೇಶ್ವರ ಕಾಲೇಜು ವಿದಾ್ಯರ್ಥಿ ಪರ್ವಿನ್‌ ಬಾನು ನಾ್ಯಯಮೂರ್ತಿ ಗಮನಕೆ್ಕ ತಂದರು. ಇದಕೆ್ಕ ವೈನ್‌ಸ್ಟೋರ್‌ ಸುತ್ತಮುತ್ತ ವಾಸಿಸುತಿ್ತರುವ ಮಹಿಳೆಯರು ಸಹ ದನಿ ಗೂಡಿಸಿದರು.

ಕೂಡಲೇ ಸ್ಥಳಕೆ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳು್ಳವಂತೆ ಜಿಲಾ್ಲಧಿಕಾರಿ ಎನ್‌.ಎಸ್‌.ಪ್ರಸನ್ನಕುಮಾರ್‌ಗೆ ನಿರ್ದೇಶನ ನೀಡಿದ ನಾ್ಯಯಮೂರ್ತಿ, ಸಮಸೆ್ಯ ಇತ್ಯರ್ಥವಾಗುವವರೆಗೆ ಮಹಿಳೆಯರು ಮತು್ತ ವಿದಾ್ಯರ್ಥಿನಿಯರ ರಕ್ಷಣೆಗಾಗಿ ವೈನ್‌ ಸ್ಟೋರ್‌ ಸಮೀಪ ಇಬ್ಬರು ಪೊಲೀಸರನು್ನ ಬೆಳಿಗೆ್ಗ 7.30ರಿಂದ 10.30 ವರೆಗೆ ಹಾಗೂ ಮಧಾ್ಯಹ್ನ 3 ರಿಂದ 6 ಗಂಟೆವರೆಗೆ ನಿಯೋಜಿಸುವಂತೆ ಜಿಲಾ್ಲ ಪೊಲೀಸ್‌ ವರಿಷಾ್ಠಧಿಕಾರಿಗೆ ಆದೇಶಿಸಿದರು.

ಅಬಿ್ಬಗೇರಿ ಗಾ್ರಮದಲಿ್ಲ ಕರೆ ಸುತ್ತಮುತ್ತಲಿನ ಜಾಗವನು್ನ 18 ಕುಟುಂಬಗಳು ಒತ್ತುವರಿ ಮಾಡಿಕೊಂಡಿವೆ. ಈ ಬಗೆ್ಗ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಬಿ.ವೈ.ಪಾಟೀಲ ದೂರಿದರು.

ಕೆರೆ ಒತು್ತವರಿ ತೆರವುಗೊಳಿಸಲು ಹೊಸ ಜಾಗ ಖರೀದಿಸಬೇಕು. ಐದು ತಿಂಗಳಲಿ್ಲ ಈ ಪ್ರಕರಣ ಇತ್ಯರ್ಥ ಮಾಡುವಂತೆ ಮುಖ್ಯ ಕಾರ್ಯನಿರ್ಹಣಾಧಿಕಾರಿ ವಿ.ಜಿ.ತುರಮರಿಗೆ  ಸೂಚಿಸಲಾಯಿತು.

ನಗರದ ವೀರೇಶ್ವರ ಪುಣಾ್ಯಶ್ರಮಕೆ್ಕ ಸರ್ಕಾರ ನೀಡಿರುವ ರೂ. 2.20 ಕೋಟಿ ಅನುದಾನದಲಿ್ಲ ಸಾಕಷ್ಟು ಅವ್ಯವಹಾರವಾಗಿದೆ. ಸಂಗೀತ ಉಪಕರಣ ಖರೀದಿ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂಬ ಉತ್ತರ ನೀಡುತಾ್ತರೆ. ಲೆಕ್ಕ ಪತ್ರ ನೀಡುವುದಿಲ್ಲ ಎಂದು ವಿ.ವಿ.ಹಿರೇಮಠ ಕಡನಿ  ಆರೋಪಿಸಿದರು. ಪರಿಶೀಲಿಸಿ ಕ್ರಮ ಕೈಗೊಳು್ಳವಂತೆ ಜಿಲಾ್ಲಧಿಕಾರಿಗೆ ಸೂಚಿಸಿದರು.

1999ರಲಿ್ಲ ನಗರಾಭಿವೃದಿ್ಧ ಪಾ್ರಧಿಕಾರ ನಿವೇಶಕೆ್ಕ ಅರ್ಜಿ ಆಹಾ್ವನಿಸಿತು್ತ. 4,440 ಮಂದಿ ನೋಂದಣಿ ಶುಲ್ಕ ಪಾವತಿಸಿದಾ್ದರೆ. ಇದುವರೆಗೂ ಪಾ್ರಧಿಕಾರ ನಿವೇಶನ ನೀಡಿಲ್ಲ ಮತು್ತ ಹಣ ಹಿಂತಿರುಗಿಸಿಲ್ಲ ಎಂದು ಅರ್ಜಿದಾರರ ಪರವಾಗಿ ಶಾಂತೇಶ ಚಾವಡಿ ಹೇಳಿದರು.

ನೋಂದಣಿ ಶುಲ್ಕ 25 ಲಕ್ಷ ರೂಪಾಯಿ ಠೇವಣಿ ಇಡಲಾಗಿದೆ. ಭೂಮಿ ಸಿಗದ ಕಾರಣ ನಿವೇಶನ ನೀಡಲು ಆಗಿಲ್ಲ ಎಂದು ಪಾ್ರಧಿಕಾರದ ಅಧಿಕಾರಿ ಉತ್ತರಿಸಿದರು.

ಇದಕೆ್ಕ ಪ್ರತಿಕಿ್ರಯಿಸಿದ ನಾ್ಯಯಮೂರ್ತಿ, ನಗರದ ಹೊರವಲಯದಲಿ್ಲ ಭೂಮಿ ಖರೀದಿಸಿ. ಅರ್ಜಿ ಸಲಿ್ಲಸಿದವರಿಗೆಲ್ಲ ಕೊಡಬೇಡಿ. ಅವಶ್ಯಕತೆ ಇದ್ದವರಿಗೆ ಈಗಿನ ಮಾರುಕಟೆ್ಟ ದರ ಪಾವತಿಸಲು ಒಪಿ್ಪದರೆ ಕೊಡಬಹುದು. ಎರಡೂವರೆ ವರ್ಷದಲಿ್ಲ ಸಮಸೆ್ಯ ಬಗೆಹರಿಸುವಂತೆ ಜಿಲಾ್ಲಧಿಕಾರಿಗೆ ಸೂಚಿಸಿದರು.

ಹದಗೆಟ್ಟ ರಸೆ್ತ, ಉದ್ಯೋಗ ಖಾತಿ್ರಯಲಿ್ಲ ಸತ್ತವರ ಹೆಸರಲೂ್ಲ ಜಾಬ್‌ ಖಾರ್ಡ್‌, ಕಳಪೆ ಕಟ್ಟಡ ನಿರ್ಮಾಣ, ವಶಪಡಿಸಿಕೊಂಡ ಭೂಮಿಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂದು ದೂರು ನೀಡಿದರು. 

ಸಮಸೆ್ಯಗಳನು್ನ ಸಂಬಂಧಪಟ್ಟವರ ಗಮನಕೆ್ಕ ತಂದು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ನಾ್ಯಯಮೂರ್ತಿ ಸೂಚನೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.