ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿ ಗ್ರಾಮ ಪಂಚಾಯತಿಯ ಒಂದನೇ ವಾರ್ಡ್ನ ನೂತನ ಸದಸ್ಯರಾಗಿ ಅಖಂಡಪ್ಪ ಬಸವಂತಪ್ಪ ಕರ್ಜೆಕಣ್ಣವರ ಆಯ್ಕೆ ಆದರು.
ಈ ವಾರ್ಡ್ನ ಸದಸ್ಯ ನಿಧನರಾದ ಕಾರಣ ತೆರವಾದ ಸ್ಥಾನಕ್ಕೆ ಮೇ 25ರಂದು ಚುನಾವಣೆ ನಡೆದಿತ್ತು. ಬುಧವಾರ ಲಕ್ಷ್ಮೇಶ್ವರದ ತಹಶೀಲ್ದಾರ್ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಸದಸ್ಯ ಅಖಂಡಪ್ಪ ಅವರು ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶಾಂತವ್ವ ತಿಪ್ಪಣ್ಣ ಸ್ವಾದಿ ಅವರಿಗಿಂತ 209 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚುನಾವಣೆ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ ನಾಯಕ ಕಾರ್ಯನಿರ್ವಹಿಸಿದರು. ತಹಶೀಲ್ದಾರ್ ವಾಸುದೇವ ಸ್ವಾಮಿ ಪ್ರಮಾಣ ಪತ್ರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.