ADVERTISEMENT

ತಿಪ್ಪಣ್ಣ ವಡ್ಡರ ಸಾವು | ಆತ್ಮಹತ್ಯೆ ಅಲ್ಲ, ಅದು ಕೊಲೆ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:55 IST
Last Updated 29 ಅಕ್ಟೋಬರ್ 2025, 4:55 IST
ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿದರು.
ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿದರು.   

ಶಿರಹಟ್ಟಿ: ‘ಸಮೀಪದ ಬೆಳ್ಳಟ್ಟಿ ಗ್ರಾಮದಲ್ಲಿ ತಿಪ್ಪಣ್ಣ ವಡ್ಡರ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಶುದ್ದ ಸುಳ್ಳು. ಅವರನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಬೇಕು’ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಆರೋಪ ಮಾಡಿದರು.

ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಹಿಂದೂ‌ಗಳನ್ನು ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವ ಚರ್ಚ್‌ಗಳನ್ನು ಬಂದ್ ಮಾಡಬೇಕು. ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಬೇಕು’ ಎಂದರು. 

‘ಹಿಂದೂ ಧರ್ಮದ ತಿಪ್ಪಣ್ಣ ವಡ್ಡರ ಅವರನ್ನು ಕೊಲೆ ಮಾಡಿ ಚರ್ಚ್‌ ಮುಂಭಾಗದಲ್ಲಿ ನೇತು ಹಾಕಲಾಗಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ಪಾರದರ್ಶಕವಾಗಿ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಂಘಟನೆಯ ಮುಖಂಡ ಸಂತೋಷ ಕುರಿ ಮಾತನಾಡಿದರು. ಪ್ರವೀಣಗೌಡ ಪಾಟೀಲ, ಈರಣ್ಣ ಅಂಗಡಿ, ಆನಂದ ಸತ್ಯಮ್ಮನವರ, ಬಸನಗೌಡ ಪಾಟೀಲ, ಪ್ರಕಾಶ ಶಿರಹಟ್ಟಿ, ವಿಜಯ ಸಜ್ಜನ, ಮೃತ್ಯುಂಜಯ ಬೂದಿಹಾಳ, ಅಭಿಷೇಕ ಹುಬ್ಬಳ್ಳಿ, ಮುತ್ತು ಆರೇರ, ಗೌತಮ ಹಳ್ಳೆಮ್ಮನವರ, ಮಲ್ಲನಗೌಡ ಪಾಠಿಲ, ವಿಠೋಬ ಬಡಖಂಡಪ್ಪನವರ, ಗಂಗಾದರ ಬಳಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.