ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದಲ್ಲಿ ಮಂಗಳವಾರ ಬಸ್ ಸ್ಟೇರಿಂಗ್ ಕಟ್ ಆಗಿದ್ದರಿಂದ ಪ್ರಯಾಣಿಕರು ಆತಂಕಕ್ಕೀಡಾದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಜೇಂದ್ರಗಡ ಡಿಪೋದ ಬಸ್ ಗಜೇಂದ್ರಗಡದಿಂದ ಹನಮನಾಳಕ್ಕೆ ಸಂಚರಿಸುತ್ತಿದ್ದಾಗ ರಾಜೂರ ಬಸ್ ನಿಲ್ದಾಣದ ಹತ್ತಿರ ಸ್ಟೇರಿಂಗ್ ಕಟ್ ಆಗಿದೆ. ರಸ್ತೆಯ ಬದಿ ನಿಂತಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಘಟನೆಯಿಂದ ಲಕ್ಕಲಕಟ್ಟಿ, ನಾಗೇಂದ್ರಗಡ, ಹನಮನಾಳ ಗ್ರಾಮಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಬೇರೆ ವಾಹನಕ್ಕಾಗಿ ರಸ್ತೆ ಬದಿ ಕಾದು ಕುಳಿತರು. ಗಜೇಂದ್ರಗಡ ಬಸ್ ಡಿಪೊದ ಬಹುತೇಕ ಬಸ್‌ಗಳು ಹಳೆಯದಾಗಿದ್ದು, ಪದೇ ಪದೇ ಕೆಟ್ಟು ನಿಲ್ಲುವುದರ ಜೊತೆಗೆ ಚಾಲಕರ ನಿಯಂತ್ರಣಕ್ಕೆ ಸಿಗದೆ ಅಪಘಾತಗೊಂಡ ಉದಾಹರಣೆಗಳಿವೆ. ಇನ್ನಾದರೂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.