ಲಕ್ಷ್ಮೇಶ್ವರ: ದಶಕಗಳ ಹಿಂದೆ ಪಟ್ಟಣದಲ್ಲಿ ಬೆಣ್ಣೆ ಮಾರಾಟ ಮಾಡುವವರಿಗಾಗಿ ಪ್ರತ್ಯೇಕ ಜಾಗೆ ಇತ್ತು. ಅದಕ್ಕೆ ಬೆಣ್ಣಿ ಪ್ಯಾಟಿ ಎಂದೇ ಕರೆಯುತ್ತಿದ್ದರು. ಆದರೆ, ಇದೀಗ ಸೋಮೇಶ್ವರ ಪಾದಗಟ್ಟಿ ಹತ್ತಿರ ಪಾದಗಟ್ಟಿ ಮೇಲೆ ಕುಳಿತು ಬೆಣ್ಣೆ ಮಾರಾಟ ಮಾಡುತ್ತಿದ್ದಾರೆ. ಹಿಂದಿನಿಂದಲೂ ಪಟ್ಟಣದ ವಾಚೇಶ್ವರ ದೇವಸ್ಥಾನದ ಆವರಣದ ಎದುರು ಬೆಣ್ಣೆ ಮಾರಾಟ ನಡೆಯುತ್ತಿತ್ತು. ಅಲ್ಲಿ ಬೆಣ್ಣೆ ಮಾರಾಟಕ್ಕೆ ವಿಶಾಲ ಜಾಗೆ ಇತ್ತು.
ಸದ್ಯ ಬೆಣ್ಣೆ ಮಾರಾಟ ನಡೆಯುವ ಸ್ಥಳ ಇಕ್ಕಟ್ಟಾಗಿದೆ. ದ್ವಿಚಕ್ರ ವಾಹನ ಹೋಗಲೂ ಇಲ್ಲಿ ಸವಾರರು ಕಷ್ಟಪಡಬೇಕಾದ ಪರಿಸ್ಥಿತಿ ಇದ್ದು, ಇಂತ ಜಾಗೆಯಲ್ಲಿ ಬೆಣ್ಣೆ ಮಾರಾಟಗಾರರು ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ನಡೆಸುತ್ತಿದ್ದು, ಜಾಗೆ ಮತ್ತಷ್ಟು ಇಕ್ಕಟ್ಟಾಗಿ ವಾಹನ ಹಾಗೂ ಜನರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸಂತೆ ದಿನ ಜನದಟ್ಟಣೆ ಹಾಗೂ ವಾಹನದಟ್ಟಣೆ ಹೆಚ್ಚಿರುತ್ತದೆ.
‘ಬೆಣ್ಣೆ ಮಾರಾಟಕ್ಕೆ ಪುರಸಭೆ ಸೂಕ್ತ ಜಾಗೆ ನಿಗದಿಪಡಿಸಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.