ADVERTISEMENT

ರೋಣ| ಸಿ.ಸಿ. ಟಿವಿ ಅಳವಡಿಸಿ ಸುರಕ್ಷತೆ ಕಾಪಾಡಿಕೊಳ್ಳಿ: ಎಲ್.ಕೆ.ಜೂಲಕಟ್ಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 15:59 IST
Last Updated 5 ಆಗಸ್ಟ್ 2023, 15:59 IST
ರೋಣ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಗಡಿ ಮಾಲೀಕರಿಗೆ ಸಿಸಿಟಿವಿ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಭಿತ್ತಿಪತ್ರವನ್ನು ಪಿಎಸ್‌ಐ ಎಲ್.ಕೆ.ಜೂಲಕಟ್ಟಿ ಮತ್ತು ಸಿಬ್ಬಂದಿ ವಿತರಿಸಿದರು
ರೋಣ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಗಡಿ ಮಾಲೀಕರಿಗೆ ಸಿಸಿಟಿವಿ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಭಿತ್ತಿಪತ್ರವನ್ನು ಪಿಎಸ್‌ಐ ಎಲ್.ಕೆ.ಜೂಲಕಟ್ಟಿ ಮತ್ತು ಸಿಬ್ಬಂದಿ ವಿತರಿಸಿದರು   

ರೋಣ: ಅಪರಾಧ ಚಟುವಟಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಸಿಸಿಟಿವಿ ಅಳವಡಿಸಿಕೊಳ್ಳಿ ಎಂದು ಪಿಎಸ್ಐ ಎಲ್.ಕೆ.ಜೂಲಕಟ್ಟಿ ಹೇಳಿದರು.

ಗದಗ ಜಿಲ್ಲಾ ಪೊಲೀಸ್ ಹಾಗೂ ರೋಣ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಮುಲ್ಲಾನಬಾವಿ ವೃತ್ತ, ಬಸ್ ನಿಲ್ದಾಣದ ಮುಂದಿನ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿರುವ ಟ್ರಾಕ್ಟರ್, ಬೈಕ್ ಶೋ ರೂಂ, ಜಿಒ ಆಫೀಸ್, ಟೈಯರ್, ಪುಸ್ತಕ, ಬೇಕರಿ, ಹೋಟೆಲ್, ಹಾಗೂ ದಿನಸಿ ಅಂಗಡಿಗಳಿಗೆ ಶನಿವಾರ ಭೇಟಿ ನೀಡಿ ಸುರಕ್ಷತೆಯ ಭಿತ್ತಿ ಪತ್ರ ಹಂಚುವುದರ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಪೊಲೀಸ್ ತಂಡ ಮಾಡಿತು.

ಪಟ್ಟಣದಲ್ಲಿ ನಡೆಯುವ ಕಳ್ಳತನ ಪ್ರಕರಣಗಳನ್ನು ಹತೋಟಿಗೆ ತರಲು ಹಾಗೂ ಇನ್ನಿತರ ಅಹಿತಕರ ಘಟನೆ ಸೆರೆಯಿಡಿಯುವಲ್ಲಿ ಈ ಸಿಸಿಟಿವಿಗಳು ಪ್ರಮುಖ ಪಾತ್ರ ವಹಿಸುತ್ತವೆ ಆದ್ದರಿಂದ ಪ್ರತಿಯೊಂದು ಅಂಗಡಿಯವರು ಸಿಸಿಟಿವಿ ಅಳವಡಿಸುವುದರಿಂದ ಆರಕ್ಷಕರ ಅರ್ಧ ಕಾರ್ಯ ಅವುಗಳೇ ನಿಭಾಯಿಸುತ್ತವೆ.

ADVERTISEMENT

ಅವುಗಳ ಸಹಾಯದಿಂದ ಅಪರಾಧಿಗಳನ್ನು ಸೆರೆ ಹಿಡಿಯುವ ಕೆಲಸ ಸರಳವಾಗುವುದು ಅದರಿಂದ ಅಪರಾಧ ಕೃತ್ಯಗಳ ಪ್ರಮಾಣ ಕಡಿಮೆಯಾಗಿ ಸುರಕ್ಷತೆಯಿಂದ ಇರಲು ಅತ್ಯಂತ ಸಹಕಾರಿಯಾಗಲಿವೆ ಎಂದರು.

ಪೊಲೀಸ್‌ ಸಿಬ್ಬಂದಿ ಕುಮಾರ ತಿಗರಿ, ಮಂಜು ಕುರಿ ಸೇರಿದಂತೆ ಅಂಗಡಿ ಮಾಲೀಕರಾದ ಶಂಕರ ಮಿಸ್ಕಿನ್ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.