ನರಗುಂದ: ಬಾಲ ಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗಾಗಿದೆ. ಅದು ನಿರ್ಮೂಲನೆಯಾದಾಗ ಮಾತ್ರ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ಪ್ರಾಚಾರ್ಯ ಕೆ. ಎಂ. ಮಾಕಣ್ಣವರ ಹೇಳಿದರು.
ತಾಲ್ಲೂಕಿನ ಕೊಣ್ಣೂರ ಕೆ.ಇ.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಈಚೆಗೆ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಭಾರತ ತಲೆ ಎತ್ತಿ ಹೆಮ್ಮೆ ಪಡಬೇಕೆಂದರೆ ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಬೇಕು. ಮಕ್ಕಳಿಗೆ ಕೆಲಸಕ್ಕೆ ಹಚ್ಚದೇ ಶಿಕ್ಷಣ ನೀಡಬೇಕು. ಅವರೇ ಮುಂದಿನ ನಾಗರಿಕರು. ಅವರಿಂದ ದೇಶದ ಭವಿಷ್ಯ ನಿರ್ಮಾಣ. ಆದ್ದರಿಂದ ಬಾಲಕಾರ್ಮಿಕ ಪದ್ದತಿ ತೊಲಗಿಸಲು ಸಮುದಾಯ ಕೈ ಜೋಡಿಸಬೇಕು ಎಂದು ಹೇಳಿದರು.
ಉಪನ್ಯಾಸಕ ಎಂ.ಡಿ.ಚಲವಾದಿ ಉಪನ್ಯಾಸ ನೀಡಿದರು.ಎಸ್.ಎಂ.ಚವ್ಹಾಣ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಚ್ ಎಸ್. ಶಿವಪ್ಪಯ್ಯನಮಠ ಹಾಗೂ ಉಪನ್ಯಾಸಕರು ಇದ್ದರು. ಬಿ.ಎಫ್.ಕರಿಗಾರ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.