ADVERTISEMENT

ಗದಗ ಜಿಲ್ಲೆ: 68 ಮಂದಿಗೆ ಕೋವಿಡ್‌ ದೃಢ

ಕೋವಿಡ್‌–19 : ವರದಿ ಬರಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ 165

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 16:44 IST
Last Updated 23 ಸೆಪ್ಟೆಂಬರ್ 2020, 16:44 IST

ಗದಗ: ‘ಜಿಲ್ಲೆಯಲ್ಲಿ ಮತ್ತೆ 68 ಮಂದಿಗೆ ಕೋವಿಡ್‌–19 ತಗುಲಿರುವುದು ಬುಧವಾರ ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ತಾಲ್ಲೂಕಿನಲ್ಲಿ 36, ಮುಂಡರಗಿ 6, ರೋಣ 12, ಶಿರಹಟ್ಟಿ 9 ಹಾಗೂ ಹೊರ ಜಿಲ್ಲೆಯ 5 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ಜಿಮ್ಸ್‌, ಕಳಸಾಪುರ ರಸ್ತೆ, ಹಮಾಲರ ಪ್ಲಾಟ್‌, ಮಕಾನ ಗಲ್ಲಿ, ಕರಿಯಮ್ಮಕಲ್, ಪ್ರಸಾದ ಲಾಡ್ಜ್‌ ರಸ್ತೆ, ಬಾಲಾಜಿ ನಗರ, ಮುಳಗುಂದ ನಾಕಾ, ರಾಜೀವಗಾಂಧಿ ನಗರ, ಗಾಂಧಿ ನಗರ, ಟ್ಯಾಗೋರ್‌ ರಸ್ತೆ, ಶಿವಾನಂದ ನಗರ, ಜೈನ್‌ ಕಾಲೊನಿ, ಕೆ.ಸಿ.ರಾಣಿ ರಸ್ತೆ, ಎಸ್.ಎಂ.ಕೆ.ನಗರ, ಮಾರುತಿ ನಗರ, ರೈಲ್ವೆ ಕ್ವಾಟ್ರಸ್‌, ಗದಗ ತಾಲ್ಲೂಕಿನ ಹುಲಕೋಟಿ, ಮಲ್ಲಸಮುದ್ರ, ನಾರಾಯಣಪುರ, ಲಕ್ಕುಂಡಿ, ಕುರ್ತಕೋಟಿ, ಮುಳಗುಂದ, ಅಸುಂಡಿ, ಕಣವಿ, ಕೋಟುಮಚಗಿ.

ADVERTISEMENT

ಮುಂಡರಗಿ ತಾಲ್ಲೂಕಿನ ಗಂಗಾಪುರ, ರೋಣ ಪಟ್ಟಣದ ಬಸ್‌ ನಿಲ್ದಾಣ ರಸ್ತೆ, ರೋಣ ತಾಲ್ಲೂಕಿನ ನರೇಗಲ್, ಸಂದಿಗವಾಡ, ಅಬ್ಬಿಗೇರಿ, ಸೂಡಿ, ಹುಲ್ಲೂರ, ಜಕ್ಕಲಿ, ಮಲ್ಲಾಪುರ, ಹಿರೇಮಣ್ಣೂರ, ಶಿರಹಟ್ಟಿ ಪಟ್ಟಣದ ಬಾಪೂಜಿ ಐಟಿಐ ಕಾಲೇಜು ರಸ್ತೆ, ತಾಲ್ಲೂಕಿನ ಶಿಗ್ಲಿ, ಮಂಜುಳಾಪುರ. ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ, ಫಕ್ಕಿರೇಶ್ವರ ಮಠ, ಹಿರೇಬಣದಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ.

ಗದಗ ಜಿಲ್ಲೆ ಅಂಕಿ ಅಂಶ

ಒಟ್ಟು ಪಾಸಿಟಿವ್ ಪ್ರಕರಣಗಳು: 8,635; ಇಂದಿನ ಪ್ರಕರಣಗಳು: 68

ಇಲ್ಲಿಯವರೆಗೆ ಕೋವಿಡ್‍ನಿಂದ ಮೃತಪಟ್ಟವರು: 125; ಇಂದಿನ ಸಾವು: 00

ಸೋಂಕಿನಿಂದ ಗುಣಮುಖರಾದವರು: 7,695; ಇಂದಿನ ಗುಣಮುಖ: 125

ಸಕ್ರಿಯ ಪ್ರಕರಣಗಳು: 815

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.