ಬೆಳವಣಕಿ (ರೋಣ): ಸ್ಥಳೀಯ ಬಸ್ ನಿಲ್ದಾಣದ ಹತ್ತಿರ ಇರುವ ಪುಟ್ಟರಾಜ ಗವಾಯಿಗಳ ಮೂರ್ತಿ ಎದುರು ರೋಣ ಪೊಲೀಸರು ಬೆಳವಣಿಕಿ, ಯಾವಗಲ್, ಯಾ.ಸ.ಹಡಗಲಿ, ಕೌಜಗೇರಿ ಗ್ರಾಮಗಳ ಸಾರ್ವಜನಿಕರಿಗೆ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕ್ರಮಗಳ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಮನೆಕಳವು, ವಾಹನ ಕಳ್ಳತನ, ಸರಗಳ್ಳತನ, ಅಂಗಡಿಗಳ ಕಳವು, ಆಭರಣ ಧರಿಸಿದ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಏಕಾಂಗಿ ವಾಕಿಂಗ್ ಹೋಗಬಾರದು, ಅಪರಿಚಿತರು ವಿಳಾಸ ಕೇಳುವ ನೆಪ ಮಾಡಿ ನಿಮ್ಮ ಹತ್ತಿರ ಬಂದರೆ ಅವರಿಂದ ದೂರ ಇರಬೇಕು, ರೈಲು ಬಸ್ಸು, ಆಟೊಗಳನ್ನು ಹತ್ತುವಾಗ ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರ ಬಗ್ಗೆ ಎಚ್ಚರವಿರಬೇಕು, ನಿಮ್ಮ ಗಮನ ಬೇರೆಡೆ ಸೆಳೆದು ಕಳವು ಮಾಡುವ ಬಗ್ಗೆ ಎಚ್ಚರ ಇರಲಿ ಎಂದು ಮುನ್ನಚ್ಚರಿಕೆ ಕ್ರಮಗಳನ್ನು ತಿಳಿಸಿದರು.
ತುರ್ತು ಸಂದರ್ಭದಲ್ಲಿ 112 ನಂಬರ್‌ಗೆ ಕರೆ ಮಾಡುವಂತೆ ತಿಳಿಸಿದರು. ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿದರು.
ರೋಣ ಪೋಲಿಸ್ ಅಧಿಕಾರಿ ಆನಂದ ಮೇಟಿ, ಎಂ.ಎಸ್.ಪರ್ವತಗೌಡ, ಊರಿನ ಗಣ್ಯರಾದ ಬಸನಗೌಡ ಪಾಟೀಲ, ಮಾರುತಿ ಸಣಕಲ್ಲ, ಸೋಮು ಬಿಂಗಿ, ಮಂಜಪ್ಪ ಮಾದರ, ಫಕ್ಕಿರಪ್ಪ ಸಂಗಳದ, ಸಂಗಪ್ಪ ಹದ್ಲಿ, ಪ್ರಸಾಂತ ನಾಗನೂರ, ರುದ್ರಪ್ಪ ಬಳ್ಳೋಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.