ADVERTISEMENT

ಲಕ್ಷ್ಮೇಶ್ವರ: ಸಮರ್ಪಕ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:30 IST
Last Updated 21 ಮೇ 2025, 14:30 IST
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಬುಧವಾರ ಲಕ್ಷ್ಮೇಶ್ವರದ 18ನೇ ವಾರ್ಡ್‍ನ ನಿವಾಸಿಗಳು ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಬುಧವಾರ ಲಕ್ಷ್ಮೇಶ್ವರದ 18ನೇ ವಾರ್ಡ್‍ನ ನಿವಾಸಿಗಳು ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು   

ಲಕ್ಷ್ಮೇಶ್ವರ: ‘ಕಳೆದ 20 ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಮೈಲುಗಟ್ಟಲೆ ದೂರದಿಂದ ಹೊತ್ತುಕೊಂಡು ನೀರು ತರಬೇಕಾಗಿದೆ. ಕೂಡಲೇ ನಮ್ಮ ಓಣಿಗೆ ನೀರು ಬಿಡಬೇಕು’ ಎಂದು ಆಗ್ರಹಿಸಿ ಬುಧವಾರ ಪಟ್ಟಣದ 18ನೇ ವಾರ್ಡ್‍ನ ನಿವಾಸಿಗಳು ಪುರಸಭೆಗೆ ದೌಡಾಯಿಸಿ ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.

ನಿಂಗಪ್ಪ ಬಾಲೆಹೊಸೂರು ಮಾತನಾಡಿ, ‘ನಮ್ಮ ಓಣಿಗೆ 20 ದಿನವಾದರೂ ಕುಡಿಯುವ ನೀರು ಪೂರೈಕೆಯಾಗಿಲ್ಲ. ಈ ಕುರಿತು ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಮರ್ಪಕ ನೀರು ಪೂರೈಕೆಯಾಗದಿದ್ದರೆ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.

ಜಯವ್ವ ಬಾಲೆಹೊಸೂರ ಮಾತನಾಡಿ, ‘ವರ್ಷಕ್ಕೊಮ್ಮೆ ಮಾತ್ರ ನಮ್ಮ ವಾರ್ಡ್‌ನ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಚರಂಡಿ ತುಂಬಾ ತ್ಯಾಜ್ಯ ತುಂಬಿಕೊಂಡಿದ್ದು, ದುರ್ವಾಸನೆ ಬೀರಿದೆ’ ಎಂದು ದೂರಿದರು.

ADVERTISEMENT

ಭರಮಪ್ಪ ಕಡ್ಡಿಪೂಜಾರ, ಯಲ್ಲಪ್ಪ ಕಡ್ಡಿಪೂಜಾರ ಮಂಜುನಾಥ ಕಡ್ಡಿಪೂಜಾರ, ದುಂಡಪ್ಪ ಕಡ್ಡಿಪೂಜಾರ, ಹನಮಂತಪ್ಪ ಕಡ್ಡಿಪೂಜಾರ, ಲಕ್ಷ್ಮವ್ವ, ಕಮಲವ್ವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.