ನರಗುಂದ: ಪಟ್ಟಣದ ಜಗನ್ನಾಥ್ ರಾವ್ ಜೋಷಿ ಮತ್ತು ಎಫ್.ಎಂ. ಹಸಬಿ ರೈಲ್ವೆ ಹೋರಾಟ ಕೇಂದ್ರ ಸಮಿತಿ ಸದಸ್ಯರು ಈಚೆಗೆ ಕುಷ್ಟಗಿಗೆ ಭೇಟಿ ನೀಡಿದ್ದ ಕೇಂದ್ರ ರೇಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ನೂತನ ರೈಲ್ವೆ ಮಾರ್ಗ ಆರಂಭಿಸುವಂತೆ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಸದಸ್ಯ ಚನ್ನು ನಂದಿ ಮಾತನಾಡಿ, ‘ನೂತನ ರೈಲ್ವೆ ಮಾರ್ಗ ಮಂಜೂರಿ ಮಾಡಬೇಕು. ಇದಕ್ಕಾಗಿ ತ್ವರಿತವಾಗಿ ಸಮೀಕ್ಷೆ ಮಾಡಬೇಕು. ಕುಷ್ಟಗಿ ಪಟ್ಟಣ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣಗಳ ಸಂಪರ್ಕ ಕೇಂದ್ರವಾಗಿದೆ. ರೇಣುಕಾ ಎಲ್ಲಮ್ಮ ದೇವಿಯ ದರ್ಶನಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಕುಷ್ಟಗಿಯಿಂದ ನರಗುಂದ, ಯಲ್ಲಮ್ಮನಗುಡ್ಡ ಮಾರ್ಗವಾಗಿ ಘಟಪ್ರಭಾಕ್ಕೆ ರೈಲು ಮಾರ್ಗ ಅವಶ್ಯವಿದೆ. ಇದಕ್ಕಾಗಿ ಈ ಭಾಗದ ಸಂಸದರ, ಸಭೆ ಕರೆದು ಸಮಗ್ರವಾಗಿ ಚರ್ಚಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಹೇಳಿದರು.
ಜಿ.ಆರ್. ಕದಂ, ನಾಗೇಶ್ ಅಪ್ಪೋಜಿ, ಮನೋಹರ್ ಹುಯಿಲಗೋಳ್, ಶಿವಯೋಗಿ ಬೆಂಡಿಗೇರಿ, ವೀರೇಶ ಬಂಗಾರ ಶೆಟ್ಟರ, ಬಸವರಾಜ ಗಾಣಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.