ADVERTISEMENT

ನರಗುಂದ: ರೈಲ್ವೆ ಮಾರ್ಗ ಮಂಜೂರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:17 IST
Last Updated 1 ಜೂನ್ 2025, 15:17 IST
ನರಗುಂದದಲ್ಲಿ ಸಂಸದ ಪಿ.ಸಿ.ಗದ್ದಿಗೌಡ್ರ ಮತ್ತು ಶಾಸಕ ಸಿ.ಸಿ.ಪಾಟೀಲರಿಗೆ ಜಗನ್ನಾಥರಾವ ಜೋಶಿ, ಎಫ್. ಎಂ.ಹಸಬಿ ಹಾಗೂ ರೈಲ್ವೆ ಹೋರಾಟ ಸಮಿತಿ ಸದಸ್ಯರು ಸೇರಿ ಘಟಪ್ರಭಾ, ಸುಕ್ಷೇತ್ರ ಯಲ್ಲಮ್ಮಗುಡ್ಡ, ನರಗುಂದ, ಕುಷ್ಟಗಿ ರೇಲ್ವೆ ಮಾರ್ಗ ಯೋಜನೆ ಶೀಘ್ರದಲ್ಲಿ ಮಂಜೂರು ಮಾಡಲು ಆಗ್ರಹಿಸಿ ಮನವಿ ಸಲ್ಲಿಸಿದರು

ನರಗುಂದ: ಘಟಪ್ರಭಾ, ಸುಕ್ಷೇತ್ರ ಯಲ್ಲಮ್ಮಗುಡ್ಡ, ನರಗುಂದ, ಕುಷ್ಟಗಿ ರೇಲ್ವೆ ಮಾರ್ಗ ಯೋಜನೆ ಶೀಘ್ರದಲ್ಲಿ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿ ಸಂಸದ ಪಿ.ಸಿ.ಗದ್ದಿಗೌಡ್ರ ಮತ್ತು ಶಾಸಕ ಸಿ.ಸಿ.ಪಾಟೀಲರಿಗೆ ಪಟ್ಟಣದ ಜಗನ್ನಾಥರಾವ ಜೋಶಿ, ಎಫ್. ಎಂ.ಹಸಬಿ ಹಾಗೂ ರೈಲ್ವೆ ಹೋರಾಟ ಸಮಿತಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ ಮಾತನಾಡಿ, ‘ಈಗಾಗಲೇ ಈ ಭಾಗದ ಸಂಸದರಿಗೆ, ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಭಾಗದ ಸಂಸದರು ಹಾಗೂ ಕೇಂದ್ರ ಸಚಿವರು ಸೇರಿ ಪ್ರಧಾನಿಯವರಿಗೆ ಈ ಮಾರ್ಗದ ಅತ್ಯವಶ್ಯಕತೆಯನ್ನು ತಿಳಿಸಬೇಕಿದೆ. ಆಗ ಈ ಯೋಜನೆ ಮೊದಲ ಹಂತದಲ್ಲಿ ಆರಂಭಗೊಳ್ಳಲು ಸಾಧ್ಯ. ಆದ್ದರಿಂದ ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡುಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ಜೆ.ಆರ್.ಕದಂ, ಕಾರ್ಯದರ್ಶಿ ಮಾರುತಿ ಬೋಸಲೆ, ಉಪಾಧ್ಯಕ್ಷ ರಾಘವೇಂದ್ರ ಗುಜಮಾಗಡಿ, ನಾಗೇಶ ಅಷ್ಟೋಜಿ, ಸದ್ದಾಂ ಚಂದುನವರ, ಮನೋಹರ ಹುಯಿಲಗೋಳ, ವಿಠಲ ಮುಧೋಳೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.