ಗದಗ: ಜಗದ್ಗುರು ತೋಂಟದಾರ್ಯ ಜಾತ್ರಾ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಮೇ 19ರಿಂದ 21ರವರೆಗೆ ನಾಟಕೋತ್ಸವ ಆಯೋಜಿಸಲಾಗಿದೆ.
ನಗರದ ಜಗದ್ಗುರು ತೋಂಟದಾರ್ಯಮಠದ ಶಿವಾನುಭವ ಮಂಟಪದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.
ಸೋಮವಾರ ಸಂಜೆ 6.30ಕ್ಕೆ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಾಟಕ ರಚಿಸಿದ್ದು, ಜಗದೀಶ ಆರ್. ಜಾಣಿ ನಿರ್ದೇಶಿಸಿದ್ದಾರೆ.
ಮೇ 20ರಂದು ಸಾವಿತ್ರಿಬಾಯಿ ಫುಲೆ ಅವರ ಅಕ್ಷರಯಾನಕ್ಕೆ ಸಂಬಂಧಿಸಿದ ‘ಸರಸತಿಯಾಗಲೊಲ್ಲೆ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ರಚನೆ ಎಂ. ಭೈರೆಗೌಡ, ನಿರ್ದೇಶನ ನವೀನ ಭೂಮಿ.
ಮೇ 21ರಂದು ‘ಶ್ರೀ ಕೃಷ್ಣ ಸಂಧಾನ’ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ರಚನೆ ವಿ.ಎನ್.ಅಶ್ವತ್ಥ್. ನಿರ್ದೇಶನ ಭೀಮೇಶ ಎಚ್.ಎನ್. ಅವರದ್ದಾಗಿದೆ.
ಮೂರು ದಿನಗಳ ನಾಟಕೋತ್ಸವದಲ್ಲಿ ರಂಗಾಸಕ್ತರು, ಸಾಹಿತ್ಯಾಭಿಮಾನಿಗಳು, ಪರಿಷತ್ತಿನ ಸದಸ್ಯರು ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.