ADVERTISEMENT

ಕಣ್ಣು ಮಣ್ಣು ಮಾಡದೆ ದಾನ ಮಾಡಿ: ಡಾ.ಎಸ್.ಸಿ ಚವಡಿ

ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 5:00 IST
Last Updated 12 ಡಿಸೆಂಬರ್ 2021, 5:00 IST
ಮುಳಗುಂದದಲ್ಲಿ ನಡೆದ ಉಚಿತ ನೇತ್ರಾ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ವೈದ್ಯ ಡಾ.ಪ್ರೀತ್ ಖೋನಾ ಮಾತನಾಡಿದರು
ಮುಳಗುಂದದಲ್ಲಿ ನಡೆದ ಉಚಿತ ನೇತ್ರಾ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ವೈದ್ಯ ಡಾ.ಪ್ರೀತ್ ಖೋನಾ ಮಾತನಾಡಿದರು   

ಮುಳಗುಂದ: ಎಲ್ಲ ದಾನಕ್ಕಿಂತ ನೇತ್ರದಾನ ಶ್ರೇಷ್ಠ, ಮರಣಾ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ, ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ವೈದ್ಯ ಡಾ.ಎಸ್.ಸಿ ಚವಡಿ ಹೇಳಿದರು.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆ.ಎಲ್. ಕರಿಗೌಡ್ರ ಗೆಳಯೆರ ಬಳಗ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಡಾ.ಪದ್ಮಶ್ರೀ ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಮನುಷ್ಯನ ನಿತ್ಯದ ಚಟುವಟಿಕೆಗಳಿಗೆ ಅತೀ ಮುಖ್ಯ ಅಂಗವಾಗಿರುವ ಕಣ್ಣುಗಳ ರಕ್ಷಣೆ ಜತೆಗೆ, ಪ್ರತಿಯೊಬ್ಬರೂ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಳ್ಳುಲು ಮುಂದಾಗಬೇಕು. ಇಳಿವಯಸ್ಸಿನಲ್ಲಿ ಕಣ್ಣಿನ ಪೊರೆ ಬರುವುದು ಸಹಜ, ಆದರೆ ಅಲಕ್ಷಿಸಬೇಡಿ ಎಂದು ಹೇಳಿದರು.

ADVERTISEMENT

ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಸ್.ಎಂ. ನೀಲಗುಂದ ಮಾತನಾಡಿದರು.

ಮುಖಂಡರಾದ ಎಂ.ಡಿ ಬಟ್ಟೂರ, ರಾಮಣ್ಣ ಕಮಾಜಿ, ಬಸವರಾಜ ಸುಂಕಾಪುರ, ಮೈಲಾರಪ್ಪ ಸುಲಾಖೆ, ಟಿಎಚ್ಒ ಡಾ.ಪ್ರಿತ್ ಖೋನಾ, ವೈದ್ಯೆ ಡಾ.ಅಶ್ವಿನಿ ಕಬಾಡಿ, ನೇತ್ರ ತಜ್ಞ ಡಾ.ದಿವ್ಯಾ ರೆಡ್ಡಿ, ಡಾ. ವಾದಿರಾಜ ಇದ್ದರು. ಶಿಬಿರದಲ್ಲಿ 110ಕ್ಕೂ ಹೆಜ್ಜು ಜನರು ನೇತ್ರ ಪರಿಕ್ಷೇಗೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.