ಶಿರಹಟ್ಟಿ: ‘ಗುಬ್ಬಿ ವೀರಣ್ಣ ಪ್ರಶಸ್ತಿ’ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಫಕೀರಪ್ಪ ವರವಿ (83) ಮಂಗಳವಾರ ತಾಲ್ಲೂಕಿನ ವರವಿ ಗ್ರಾಮದಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು.
ಬಾಲ್ಯದಿಂದ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಫಕೀರಪ್ಪ ಅವರು ನಾಟಕ ಕಂಪನಿಗಳಲ್ಲಿ ಅಭಿನಯಿಸಿದರು. 1977ರಲ್ಲಿ ‘ರಾಘವೇಂದ್ರ ವಿಜಯ ನಾಟ್ಯಸಂಘ’ ಸ್ಥಾಪಿಸಿದರು. ಅವರು 100ಕ್ಕೂ ಹೆಚ್ಚು ಆಡಿಯೊ ಕ್ಯಾಸೆಟ್‌ಗಳಿಗೆ ಕಂಠದಾನ ಮಾಡುವುದರ ಜೊತೆಗೆ ಚಲನಚಿತ್ರಗಳಲ್ಲಿ ನಟಿಸಿದರು. ‘ಗುಬ್ಬಿ ವೀರಣ್ಣ ಪ್ರಶಸ್ತಿ’, ‘ಹಾಸ್ಯ ಚಕ್ರವರ್ತಿ’, ‘ಕೆ.ಹಿರಣ್ಣಯ್ಯನವರ ದತ್ತಿ ರಂಗಪ್ರಶಸ್ತಿ’ ಸೇರಿ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.