ADVERTISEMENT

ಗದಗ: ನಿಧಿ 100 ವರ್ಷ ಹಳೆಯದ್ದು ಎನ್ನಲು ಆಧಾರವೇನು? ವೆಂಕನಗೌಡ ಗೋವಿಂದಗೌಡ್ರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 2:58 IST
Last Updated 14 ಜನವರಿ 2026, 2:58 IST
ವೆಂಕನಗೌಡ ಆರ್. ಗೋವಿಂದಗೌಡ್ರ
ವೆಂಕನಗೌಡ ಆರ್. ಗೋವಿಂದಗೌಡ್ರ   

ಗದಗ: ‘ಲಕ್ಕುಂಡಿಯಲ್ಲಿ ಸಿಕ್ಕಿರುವ ನಿಧಿ 100 ವರ್ಷಗಳಿಂತ ಹಳೆಯದ್ದು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಹೇಳುತ್ತಾರೆ. ಅಧ್ಯಯನ ನಡೆಸದೇ ಅದು 100 ವರ್ಷಗಳಷ್ಟು ಹಿಂದಿನ ಆಭರಣ ಅಂತ ಯಾವ ಆಧಾರದ ಮೇಲೆ ಹೇಳುತ್ತಾರೆ’ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಪ್ರಶ್ನಿಸಿದರು.

‘ಚಿನ್ನ ಪತ್ತೆಯಾದ ಬಗ್ಗೆ ಸಿಎಂ ಹಾಗೂ ಸಚಿವರಿಗೆ ತಿಳಿಸುವುದಕ್ಕೂ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಆದರೆ, ತರಾತುರಿ ಮಾಡಿದ್ದರಿಂದಾಗಿ ಗೊಂದಲ ಸೃಷ್ಟಿಯಾಯಿತು’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪುರಾತತ್ವ ಇಲಾಖೆ ಧಾರವಾಡ ವೃತ್ತದ ಅಧೀಕ್ಷಕ ರಮೇಶ್ ಮೂಲಿಮನಿ ಅವರು ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿಯಲ್ಲ; ಅವು ಜನಸಾಮಾನ್ಯರ ಚಿನ್ನಾಭರಣ ಅಂತ ಹೇಳಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಗರಂ ಆಗಿದ್ದರು. ಬಳಿಕ ಅವರ ಮೇಲೆ ಒತ್ತಡ ತಂದು ನಿಧಿ ಅಂತ ಹೇಳಿಸಿದ್ದಾರೆ. ಅದು ನಿಧಿ ಅಂತ ಸಾಬೀತಾದರೆ ಬಯಲು ವಸ್ತು ಸಂಗ್ರಹಾಲಯಕ್ಕೆ ಸರ್ಕಾರದಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ’ ಎಂದು ಆರೋಪ ಮಾಡಿದರು.

ADVERTISEMENT

‘ಲಕ್ಕುಂಡಿ ಗ್ರಾಮದ ರೈತ ಶರಣಪ್ಪ ಕಮತರ ಎಂಬುವರ ಜಮೀನನ್ನು ಉತ್ಖನನಕ್ಕಾಗಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, 18 ವರ್ಷಗಳಿಂದ ಆ ಜಮೀನು ಪಾಳು ಬಿದ್ದಿದೆ. ಮೊದಲ ಒಂದು ವರ್ಷ ಬೆಳೆ ಪರಿಹಾರ ನೀಡಿ ನಂತರ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಇದೇ ಪರಿಸ್ಥಿತಿ ರಿತ್ತಿ ಕುಟುಂಬಕ್ಕೂ ಆಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಮುಖಂಡರಾದ ವೀರನಗೌಡ ನಾಡಗೌಡ್ರ, ಜಿ.ಕೆ.ಕೊಳ್ಳಿಮಠ, ಪ್ರಫುಲ್ ಪುಣೇಕರ, ಶೇಖರ್ ಗೌರಿಪುರ, ಬಸನಗೌಡ ನಾಡಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.