
ರೋಣ: ‘ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಮಾಡಿದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲೇಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಾಬ್ ಹೊಸಮನಿ ಆಗ್ರಹಿಸಿದರು.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಾಸಕ ಜಿ.ಎಸ್. ಪಾಟೀಲ ಅವರು ಕಳೆದ ನಾಲ್ಕು ದಶಕಗಳಿಂದ ರೋಣ ಮತಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಅವರ ಸೇವೆ ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು’ ಎಂದು ಆಗ್ರಹಿಸಿದರು.
ಅರ್ಜುನ ಕೊಪ್ಪಳ ಮಾತನಾಡಿ, ‘ಶಾಸಕ ಜಿ.ಎಸ್. ಪಾಟೀಲ ಅವರು ರೈತಪರ ಹಾಗೂ ಅಹಿಂದ ವರ್ಗಗಳ ಪರ ನಾಯಕರಾಗಿದ್ದು, ಸಚಿವ ಸ್ಥಾನ ನೀಡಬೇಕು’ ಎಂದರು.
ಈ ವೇಳೆ ಮುತ್ತಪ್ಪ ಕೊಪ್ಪದ, ರೇವಣಪ್ಪ ಗದಗಿನ, ರಾಮಪ್ಪ ಕುರಿ, ಅಶೋಕ ಕೊಪ್ಪದ, ಬಸವರಾಜ ಮುಗಳಿ, ಅಂದಪ್ಪ ಬೆಡಗಿ, ಹುಚ್ಚೀರಪ್ಪ ಗದಗಿನ, ಶಶಿಧರ ಕೊಪ್ಪದ, ಕರೀಂಸಾಬ್ ಬಸರಿಗಿಡದ, ಸಿದ್ದಪ್ಪ ಕೊಪ್ಪದ, ವೀರಭದ್ರಪ್ಪ ಕೊಪ್ಪದ, ಶರಣಪ್ಪ ಕೊಪ್ಪದ, ಬಸವರಾಜ ಕುಂಬಾರ, ಅಶೋಕ ಗಡಗಿ, ಮಲ್ಲಿಕಾರ್ಜುನ ಮುಗಳಿ, ಬಸಪ್ಪ ಕೊಪ್ಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.