ನರಗುಂದ: ‘ಪ್ರಧಾನಿ ಮೋದಿ ದೇಶಕ್ಕೆ ಹೊಸ ದಿಕ್ಕು ತೋರಿಸಿದ ನಾಯಕ. ದೇಶವನ್ನು ಜಗತ್ತಿನ 3ನೇ ಆರ್ಥಿಕ ಶಕ್ತಿಯನ್ನಾಗಿಸಿದ್ದಾರೆ. 2047ರ ಹೊತ್ತಿಗೆ ಭಾರತ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಚಿಕ್ಕನರಗುಂದದಲ್ಲಿ ಶುಕ್ರವಾರ ಬಿಜೆಪಿ, ಭಾಸ್ಕರರಾವ್ ಭಾವೆ ಸರ್ಕಾರಿ ತಾಲ್ಲೂಕು ಆಸ್ಪತ್ರೆ ಹಾಗೂ ಹುಬ್ಬಳ್ಳಿ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, 629 ಜನರು ಶಿಬಿರದ ಸೌಲಭ್ಯ ಪಡೆದರು.
ಈ ವೇಳೆ ಕೇಂದ್ರ ಸರ್ಕಾರದ ವಯೋಶ್ರೀ ಯೋಜನೆ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರೀಕರಿಗೆ ವೀಲ್ ಚೇರ್, ವಾಕ್ ಸ್ಟಿಕ್ ಸೇರಿದಂತೆ ವಿವಿಧ ಸಲಕರಣೆ ವಿತಸಲಾಯಿತು.
ದೇಸಾಯಿಗೌಡ ಪಾಟೀಲ, ಮಹೇಶ್ವರಯ್ಯ ಸುರೇಬಾನ, ಎಸ್.ಆರ್. ಪಾಟೀಲ ಮಾತನಾಡಿದರು.
ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಶಿವಪ್ಪ ಗಣೇಶಿ, ಅಶೋಕ ಜ್ಞಾನೋಪಂಥ, ಮುತ್ತು ರಾಯರಡ್ಡಿ, ಪ್ರಕಾಶಗೌಡ ತಿರಕನಗೌಡ್ರ, ಮರಿಗೌಡ ಚನ್ನಪ್ಪಗೌಡ್ರ, ಶಿವಾನಂದ ಕುಲಕರ್ಣಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ನಿಂಗಪ್ಪ ಗಾಣಿಗೇರ, ಮಲ್ಲಪ್ಪ ಕಲಹಾಳ, ಮಲ್ಲಪ್ಪ ಆರಿಬೆಂಚಿ, ಬೀರಪ್ಪ ಕಲಹಾಳ, ಸಿದ್ದೇಶ ಹೂಗಾರ, ಸಂತೋಷ ಹಂಚಿನಾಳ ಇದ್ದರು.
ಪಾಕ್ಷಿಕ ಚಟುವಟಿಕೆ: ಮೋದಿಯವರ ಜನ್ಮ ದಿನದ ಅಂಗವಾಗಿ ನರಗುಂದ ಮತಕ್ಷೇತ್ರದ ಸುರಕೋಡ, ಮೆಣಸಗಿ, ಗಾಡಗೋಳಿ, ಗಾವರವಾಡ, ಕದಡಿ, ಬೆಳವಣಿಕಿ, ಮಾಳವಾಡ, ಲಕ್ಕುಂಡಿ ಗ್ರಾಮಗಳಲ್ಲಿ ದೇವಾಲಯಗಳ ಸ್ವಚ್ಚತೆ, ಸಸಿ ನೆಡಲಾಯಿತು. ಕೊಣ್ಣೂರ, ಹೊಂಬಳ ಮತ್ತು ಬೆಳವಣಿಕಿ ಗ್ರಾಮಗಳಲ್ಲಿ ರಕ್ತದಾನ ಶಿಬಿರ ನಡೆಸಲಾಗಿದ್ದು, 166 ಜನರು ರಕ್ತದಾನ ಮಾಡಿದರು.
ಆರೋಗ್ಯ ಶಿಬಿರ: 629 ಜನರ ತಪಾಸಣೆ 166 ಜನರಿಂದ ರಕ್ತದಾನ ಪಾಕ್ಷಿಕ ಚಟುವಟಿಕೆ: ಸ್ವಚ್ಛತಾ ಕಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.