ಲಕ್ಷ್ಮೇಶ್ವರ: ತಾಲ್ಲೂಕಿನ ಮಾಡಳ್ಳಿ ಗ್ರಾಮದ ಸಿದ್ಧಾರೂಢರ ಮಠದಲ್ಲಿ ಏ 26ರಿಂದ 27ರ ವರೆಗೆ ಶಿವನಾಮ ಸಪ್ತಾಹ ಹಾಗೂ 27ರಂದು ಮಹಾರಥೋತ್ಸವ ಜರುಗಲಿದೆ. 26ರಂದು ಬ್ರಾಹ್ಮಿ ಮಹೂರ್ತದಲ್ಲಿ ಶಿವನಾಮ ಸ್ಮರಣೆ ಸಪ್ತಾಹ ಆರಂಭವಾಗಿ ಬೆಳಿಗ್ಗೆ 6ರಿಂದ 10ರ ವರೆಗೆ ಮತ್ತು ಸಂಜೆ 6ರಿಂದ 10ರ ವರೆಗೆ ಜರುಗುವುದು.
27ರಂದು ಪಾಲಕಿ ಉತ್ಸವ ಮಹಾಪ್ರಸಾದ ವಿತರಣೆ ಹಾಗೂ ಸಂಜೆ ಮಹಾರಥೋತ್ಸವ ನಡೆಯುವುದು. ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ವರವಿ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ ಸಾನೀದ್ಯ ವಹಿಸುವರು. ಸೂರಶೆಟ್ಟಿಕೊಪ್ಪದ ಶಿವಲಿಂಗೇಶ್ವರ ಸ್ವಾಮೀಜಿ ಅವರು ಕೀರ್ತನೆ ಹೇಳುವರು. ಕರಿಕಟ್ಟಿಯ ಗುರುನಾಥ ಶಾಸ್ತ್ರಿಗಳು ಪ್ರವಚನ ನೀಡುವರು. ರಾಮಣ್ಣ ಮಾಸ್ತರ ಹಾಗೂ ಭಕ್ತರಿಂದ ಭಜನಾ ಕಾರ್ಯಕ್ರಮ ನೆರವೇರುವುದು. ಪಶುಪತಿಹಾಳ ಗ್ರಾಮದ ಹೆಣ್ಣು ಮಕ್ಕಳಿಂದ ಡೊಳ್ಳಿನ ಮೇಳ ಕಾರ್ಯಕ್ರಮ ನಡೆಯುವುದು ಎಂದು ಸಿದ್ದಾರೂಢ ಸ್ವಾಮಿ ಸೇವಾ ಟ್ರಸ್ಟ್ ಕಮೀಟಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.