ADVERTISEMENT

ಶಿರಹಟ್ಟಿ:ಕಾಡಸಿದ್ದೇಶ್ವರ ಶ್ರೀಗಳ ನಿಷೇಧ ಹಿಂಪಡೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:06 IST
Last Updated 24 ಅಕ್ಟೋಬರ್ 2025, 3:06 IST
ಕನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ ಸರ್ಕಾರ ಹೇರಿದ ಸಂಚಾರ ನಿರ್ಬಂಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶಿರಹಟ್ಟಿ ತಹಶೀಲ್ದಾರ್‌ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು 
ಕನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ ಸರ್ಕಾರ ಹೇರಿದ ಸಂಚಾರ ನಿರ್ಬಂಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶಿರಹಟ್ಟಿ ತಹಶೀಲ್ದಾರ್‌ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು    

ಶಿರಹಟ್ಟಿ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಕೆಲವು ಜಿಲ್ಲೆಗಳ ಸಂಚಾರ ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಾಲ್ಲೂಕು ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರ್‌ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡ ಸಂತೋಷ ಕುರಿ ಮಾತನಾಡಿ, ‘ಶ್ರೇಷ್ಠ ಸ್ವಾಮೀಜಿಗಳಲ್ಲಿ ಒಬ್ಬರಾದ ಕನೇರಿ ಶ್ರೀಗಳು ಗೋಶಾಲೆ, ಅನಾಥಾಶ್ರಮ, ವಯೋವೃದ್ದರಿಗೆ ಮಾಶಾಸನ, ಅನಾಥ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ಗುರುಕುಲ ನಡೆಸುತ್ತಿದ್ದಾರೆ. ಸ್ವಾಮೀಜಿ ಸಂಚಾರಕ್ಕೆ ನಿರ್ಬಂಧ ಹೇರಿದ್ದು ಅತ್ಯಂತ ವಿಷಾದಕರ ಸಂಗತಿ. ಆದೇಶ ಹಿಂಪಡೆಯದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

ಈ ವೇಳೆ ಪರಶುರಾಮ ಡೊಂಕಬಳ್ಳಿ, ಶಶಿಕುಮಾರ್ ಪೂಜಾರ, ಅರುಣಕುಮಾರ ತಿರ್ಲಾಪೂರ, ಬಸವರಾಜ ಕಲ್ಯಾಣಿ, ಆನಂದ ಸ್ವಾಮಿ, ಪ್ರಕಾಶ ಶೆಳಕೆ, ದೇವಪ್ಪ ತೊಡೇಕರ, ರವಿ ಜಾಧವ, ವೀರಣ್ಣ ಅಂಗಡಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.