ನರಗುಂದ: ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯ ನವೋದಯ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರಿಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಪರೀಕ್ಷಾ ಫಲಿತಾಂಶ ಶೇ 82.45% ರಷ್ಟಾಗಿದೆ. ನವೋದಯ ಕನ್ನಡ ಮಾಧ್ಯಮ ಶಾಲೆಯ ಆಲಿಯಾ ಹವಲ್ದಾರ್ ಶೇ 91.36 ಅಂಕ ಗಳಿಸಿ (ಪ್ರಥಮ), ಚೈತ್ರಾ ಸಂಬಾಳ ಹಾಗೂ ವೈಷ್ಣವಿ ಪಾಟೀಲ
ಶೇ 86,72 ಅಂಕ ಗಳಿಸಿ (ದ್ವಿತೀಯ), ಸಮರಿನ ನಾಲಬಂದ ಶೇ 86.08 ಅಂಕ ಗಳಿಸಿ (ತೃತೀಯ) ಸ್ಥಾನ ಪಡೆದಿದ್ದಾರೆ. ಶಾಂಭವಿ ಹಾದಿಮನಿ ಶೇ 85.44 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸಮರಿನ್ ಹಜರತ್ತ ನಾಲಬಂದ ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ನವೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ರಿಯಾನಾಬಾನು ಪಿಂಜಾರ ಶೇ 91.02 ಅಂಕ ಗಳಿಸಿ (ಪ್ರಥಮ), ಕಮಲಾಕ್ಷಿ ಸಂಜೀವ ಮೇಟಿ ಶೇ 79.52 ಅಂಕ ಗಳಿಸಿ (ದ್ವಿತೀಯ), ಮಮತಾ ವೆಂಕಟೇಶ ಸುರೇಬಾನ ಶೇ 78,88 ಅಂಕ ಗಳಿಸಿ (ತೃತೀಯ) ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.