ADVERTISEMENT

ಸಮಾವೇಶದಿಂದ ಪಾಲಕರಿಗೆ ಅನುಕೂಲ: ಫಕ್ಕೀರಪ್ಪ

ಹಾಲುಮತ ಸಮಾಜದ ಏಳನೇ ರಾಜ್ಯಮಟ್ಟದ ವಧುವರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 7:22 IST
Last Updated 5 ಆಗಸ್ಟ್ 2025, 7:22 IST
ಗದಗ ನಗರದ ಕನಕ ಭವನದಲ್ಲಿನಡೆದ ಏಳನೇ ರಾಜ್ಯ ಮಟ್ಟದ ವಧುವರರ ಸಮಾವೇಶದಲ್ಲಿ ಕುರುಬ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು 
ಗದಗ ನಗರದ ಕನಕ ಭವನದಲ್ಲಿನಡೆದ ಏಳನೇ ರಾಜ್ಯ ಮಟ್ಟದ ವಧುವರರ ಸಮಾವೇಶದಲ್ಲಿ ಕುರುಬ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು    

ಗದಗ: ‘ಕುರುಬ ಸಮಾಜದಲ್ಲಿ ವಧು-ವರರ ಅನ್ವೇಷಣೆ ಇಂದು ಕಷ್ಟದಾಯಕವಾಗಿರುವುದರಿಂದ ಇಂತಹ ಸಮಾವೇಶಗಳು ಪಾಲಕರಿಗೆ ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆ ಒದಗಿಸಲಿವೆ. ಜತೆಗೆ ಹಣ ಮತ್ತು ಸಮಯದ ಉಳಿತಾಯವೂ ಆಗಲಿದೆ’ ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಫಕ್ಕಿರಪ್ಪ ಹೆಬಸೂರ ಹೇಳಿದರು.

ನಗರದ ಕನಕ ಭವನದಲ್ಲಿ ಹಾಲುಮತ ಮಹಾಸಭಾ ಗದಗ ಜಿಲ್ಲಾ ಘಟಕ ಹಾಗೂ ಕುರುಬರ ಸಂಘ ಗದಗ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಏಳನೇ ರಾಜ್ಯ ಮಟ್ಟದ ವಧುವರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾವೇಶ ಉದ್ಘಾಟಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಡಿ.ಡಿ.ಮಾಳಗಿ ಮಾತನಾಡಿ, ‘ಕುರುಬ ಸಮಾಜದ ವಧುವರರ ಸಮಾವೇಶ ಕೌಟುಂಬಿಕ ಕಾರ್ಯಕ್ರಮವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಸಮಾಜ ಬಾಂಧವರು ವಧು-ವರರಿಗೆ ಉಡಿ ತುಂಬುವ ಮೂಲಕ ಗೌರವಿಸುತ್ತಿರುವುದು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ’ ಎಂದರು.

ADVERTISEMENT

ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಬಿ.ಎಫ್.ದಂಡಿನ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸ್ಲಂ ಬೋರ್ಡ್‌ನ ರಾಜ್ಯ ನಿರ್ದೇಶಕ ರಾಮಕೃಷ್ಣ ರೊಳ್ಳಿ ಅವರನ್ನು ಸನ್ಮಾನಿಸಲಾಯಿತು.

ಈ ಸಮಾವೇಶದಲ್ಲಿ ಮಹಾರಾಷ್ಟ್ರ, ಬೆಂಗಳೂರು, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಾಮರಾಜನಗರ, ದಾವಣಗೆರೆ, ಕಾರವಾರ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ, ತುಮಕೂರ ಸೇರಿದಂತೆ ಗದಗ ಜಿಲ್ಲೆಯ ವಿವಿಧ ಭಾಗಗಳಿಂದ 156ಕ್ಕೂ ಹೆಚ್ಚು ವಧು-ವರರು ಭಾಗವಹಿಸಿದ್ದರು.

ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಸ್ವಾಮೀಜಿ, ವೈ.ಡಿ.ಜಡದೆಲಿ, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಗುಗ್ಗರಿ, ಹಾಲುಮತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಸುವರ್ಣ ನಾಗರಾಳ, ಉಮಾ ದ್ಯಾವನೂರ, ಹಾಲಪ್ಪ ಹೊಂಬಳ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಬಸವರಾಜ ನೀಲಗಾರ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ, ಸತೀಶ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ, ಮಲ್ಲೇಶ ಬಿಂಗಿ ಭಾಗವಹಿಸಿದ್ದರು.

ಶಿಲ್ಪಾ, ಸೌಮ್ಯಾ ಹಾಗೂ ಸಂಜನಾ ಪ್ರಾರ್ಥಿಸಿದರು. ಮೋಹನ ಇಮರಾಪೂರ ಕಾರ್ಯಕ್ರಮ ನಿರೂಪಿಸಿದರು.

ಸಮಾಜದ ಅನುಕೂಲಕ್ಕಾಗಿ

ಸಮಾವೇಶ ‘ವಧುವಿಗೆ ವರ ಹಾಗೂ ವರನಿಗೆ ವಧುವಿನ ಆಯ್ಕೆ ಬದುಕಿನ ಪ್ರಮುಖ ಘಟ್ಟವಾಗಿದೆ. ಇದರಿಂದ ಪಾಲಕರಿಗೆ ಅನುಕೂಲವಾಗಲೆಂದು ಏಳನೇ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು. ‘ಈ ಸಮಾವೇಶದಲ್ಲಿ ಕುರಿಗಾರರಿಂದ ಉನ್ನತ ಅಧಿಕಾರಿಗಳು ವಧುವರರ ಆಯ್ಕೆಗಾಗಿ ಬಂದಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಸಮಾಜದ ಹಿರಿಯರ ಕೊಡುಗೆ ಸಾಕಷ್ಟಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.