ಮುಂಡರಗಿ: ‘ಕುಟುಂಬ, ಪರಿಸರ, ಸಾಮರಸ್ಯ, ಸ್ವದೇಶ ಪ್ರೇಮ ಮೊದಲಾದವುಗಳ ಮೂಲಕ ಸಮ ಸಮಾಜ ನಿರ್ಮಿಸಬೇಕಿದೆ. ದೇಶದ ಐಕ್ಯತೆಗಾಗಿ ನಾವೆಲ್ಲ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸೋಣ’ ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರ ಘೋರ್ಪಡೆ ಹೇಳಿದರು.
ಇಲ್ಲಿಯ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಸಂಘ ಚಾಲಕ ಸಂಜೀವ ರಿತ್ತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಆವರದಲ್ಲಿ ಪಥ ಸಂಚಲನ ನಡೆಸಲಾಯಿತು. ಶೇಖರಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಹಕ್ಕಂಡಿ ವಂದಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಆನಂದಗೌಡ ಪಾಟೀಲ, ಎಸ್.ಎಸ್. ಗಡ್ಡದ, ವಾಸುದೇವ ಅರ್ಕಸಾಲಿ, ಅವಿನಾಶ ಗೊಡಕಿಂಡಿ, ಗುರುರಾಜ ಜೋಶಿ, ಮಂಜುನಾಥ ಇಟಗಿ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಣಿಕಿಮಠ, ಶ್ರೀನಿವಾಸ ಕಟ್ಟಿಮನಿ, ಹನುಮಂತ ಅಕ್ಕಸಾಲಿ, ಮಂಜುನಾಥ ಮುಧೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.