ಬಂಧನ (ಸಾಂದರ್ಭಿಕ ಚಿತ್ರ)
ಮುಂಡರಗಿ: ಆರ್.ಆರ್.ನಂಬರ್ ಕೊಡಿಸಲು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಶುಲ್ಕ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಪಟ್ಟಣದ ಹೆಸ್ಕಾಂ ಗುತ್ತಿಗೆದಾರ ಸಿದ್ಧನಗೌಡ ಪಾಟೀಲ ಅವರನ್ನು ವಶಕ್ಕೆ ಪಡೆದರು.
ತಾಲ್ಲೂಕಿನ ಜಂತ್ಲಿ-ಶಿರೂರು ಗ್ರಾಮದ ರೈತ ಬಿ.ಕೆ.ಗೌರಿ ಅವರು ತಮ್ಮ ಸಂಬಂಧಿಕರ ಜಮೀನಿನ ಪಂಪ್‍ಸೆಟ್ ಆರ್.ಆರ್ ನಂಬರ್ ಮಾಡಿಕೊಡಲು ಗುತ್ತಿಗೆದಾರ ಸಿದ್ಧನಗೌಡ ಪಾಟೀಲ ಅವರಲ್ಲಿ ಕೋರಿದ್ದರು. ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ₹4 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಪೂರ್ವದಲ್ಲಿ ಪ್ರಕರಣ ದಾಖಲಿಸಿದ್ದರು.
ಜಿಲ್ಲಾ ಲೋಕಾಯುಕ್ತ ಡಿ.ಎಸ್.ಪಿ. ವಿಜಯಕುಮಾರ ಬಿರಾದಾರ ನೇತೃತ್ವದ ತಂಡವು ಗುರುವಾರ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದ ಗುತ್ತಿಗೆದಾರನನ್ನು ವಶಕ್ಕೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.