
ಮುಂಡರಗಿ: ‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅತೀ ರಂಜಿತ ಹಾಗೂ ನಕಾರಾತ್ಮಕ ಸುದ್ದಿಗಳನ್ನು ಹೆಚ್ಚು ಬಿತ್ತರಿಸುತ್ತಿದ್ದು, ಅವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲಿವೆ. ಇದರಿಂದ ಸಮಾಜದಲ್ಲಿ ಯಾವ ಸುಧಾರಣೆ ತರಲಾಗುವುದಿಲ್ಲ’ ಎಂದು ಪುರಸಭೆ ಸದಸ್ಯ ಪ್ರಲ್ಹಾದ ಹೊಸಮನಿ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆಗಳು ಸಂಯುಕ್ತವಾಗಿ ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಾನೀಶ್ವರ ಸ್ವಾಮೀಜಿ ಉದಾರ ದೇಣಿಗೆ ಹಾಗೂ ನಿವೇಶನ ದಾನದ ಮೂಲಕ ಸುಸಜ್ಜಿತ ನೂತನ ಕಸಾಪ ಭವನ ನಿರ್ಮಾಣಗೊಂಡಿದ್ದು, ಅದಕ್ಕೆ ಅಗತ್ಯವಿರುವ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಶಿಕ್ಷಕ ಎಸ್.ಎಸ್.ಮಠದ ಮಾತನಾಡಿ, ಕಾಯಕ ನಿಷ್ಠೆಯುಳ್ಳ ಶರಣ ಮರುಳ ಶಂಕರದೇವರು ಅನುಭವ ಮಂಟಪದಲ್ಲಿ ಕಾಯಕ ಮಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ತತ್ವಾದರ್ಶಗಳು ನಮಗೆಲ್ಲ ಮಾದರಿಯಾಗಿವೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ಶರಣ ಚಿಂತನ ಮಾಲೆ ಉಪನ್ಯಾಸ ಕಾರ್ಯಕ್ರಮವು ಈವರೆಗೂ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದವು. ಇನ್ಮುಂದೆ ಶರಣ ಚಿಂತನ ಮಾಲೆ ಸೇರಿದಂತೆ ಎಲ್ಲ ಸಭೆ, ಸಮಾರಂಭಗಳನ್ನು ನೂತನ ಕಸಾಪ ಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿದು.
ಪತ್ರಕರ್ತರಾದ ಸಂತೋಷ ಮುರುಡಿ, ಮಹಾಲಿಂಗೇಶ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸರೋಜಾ ಹಿರೇಮಠ ಪ್ರಾರ್ಥಿಸಿದರು. ಎನ್.ಎನ್.ಕಲಕೇರಿ ಸರ್ವರನ್ನು ಸ್ವಾಗತಿಸಿದರು. ಕಾಶೀನಾಥ ಬಿಳಿಮಗ್ಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು. ವೀಣಾ ಪಾಟೀಲ ವಂದಿಸಿದರು.
ಹಿರಿಯ ಸಾಹಿತಿ ಆರ್.ಎಲ್. ಪೊಲೀಸಪಾಟೀಲ, ಮುಖಂಡರಾದ ನಾಗೇಶ ಹುಬ್ಬಳ್ಳಿ, ಎಸ್.ಬಿ.ಕೆ.ಗೌಡರ, ಶಂಕರ ಕೂಕನೂರ, ಎನ್.ಎಸ್.ಅಲ್ಲಿಪುರ, ಎ.ವೈ.ನವಲಗುಂದ, ಆರ್.ಕೆ.ರಾಯನಗೌಡರ, ವಿ.ಎಪ್.ಗುಡದಪ್ಪನವರ, ನಿಂಗು ಸೊಲಗಿ, ಎಸ್.ಬಿ.ಹಿರೇಮಠ, ಕೊಟ್ರೇಶ ಜವಳಿ, ಸುರೇಶ ಭಾವಿಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.