ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರವೂ ಜೋರಾಗಿ ಮಳೆ ಸುರಿಯಿತು. ನಿರಂತರ ಜಿಟಿಜಿಟಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಓಡಾಡುವ ರಸ್ತೆಗಳು ಕೆಸರಿನ ಹೊಂಡವಾಗಿವೆ. ಮುಂಗಾರು ಸಂದರ್ಭದ ಕೃತಿಕಾ ಮಳೆ ರೈತರಿಗೆ ವರದಾನವಾಗಿದೆ. ಆದರೆ ಜನರ ಸಂಚಾರಕ್ಕೆ ತೊಂದರೆ ಉಂಟುಮಾಡಿದೆ. ಬಿರುಬಿಸಿಲಿನ ವಾತಾವರಣ ತಂಪಿಗೆ ತಿರುಗಿದೆ.
ಸೋರುತ್ತಿರುವ ಮನೆಗಳು: ಬಿಡುವಿಲ್ಲದೇ ಅಹೋರಾತ್ರಿ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಮನೆಗಳು ಸೋರುತ್ತಿವೆ. ಮಣ್ಣಿನ ಮನೆಗಳಲ್ಲಿ ವಾಸಿಸುವವರ ಪಾಡು ಹೇಳತೀರದು. ಇದರಿಂದ ಗ್ರಾಮೀಣ ಪ್ರದೇಶದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.