ಮುಂಡರಗಿ: ‘ಜಾತಿರಹಿತ ಸಮಾಜ ನಿರ್ಮಾಣವು ಶರಣರ ಬಹುದೊಡ್ಡ ಕೊಡುಗೆಯಾಗಿದೆ. ಸಮ ಸಮಾಜ ನಿರ್ಮಾಣ ಮಾಡುವ ಮೂಲಕ ಶರಣ ನುಲಿಯ ಚಂದಯ್ಯ ಹಾಗೂ ಶರಣ ಸಮುದಾಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡುದರು’ ಎಂದು ಯುವ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ತಿಳಿಸಿದರು.
ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಅಖಿಲ ಕರ್ನಾಟಕ ಕೊರಚ ಮಹಾಸಂಘ ಹಾಗೂ ಡಂಬಳ ಕೊರಚ ಸಮಾಜ ಸಂಯುಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ‘ನುಲಿಯ ಚಂದಯ್ಯನವರು ಸಮಾಜದಲ್ಲಿನ ಜಾತಿ ತಾರತಮ್ಯ ಹಾಗೂ ಹೊಗಲಾಡಿಸಲು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದರು’ ಎಂದರು.
ಕೊರಚ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಆಂಜನೇಯ, ಗ್ರಾಮ ಪಂಚಾಯಿತಿ ಸದಸ್ಯ ಮರಿಯಪ್ಪ ಸಿದ್ದಣ್ಣವರ, ಪತ್ರಕರ್ತ ಲಕ್ಷ್ಮಣ ದೊಡ್ಡಮನಿ, ಸಿಐಟಿಯು ಅಧ್ಯಕ್ಷೆ ಸುಶೀಲಾ ಚಲವಾದಿ, ಹುಸೇನಮ್ಮ ಕೊಪ್ಪಳ ಮಾತನಾಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನುಲಿಯ ಚಂದಯ್ಯ ಅವರ ಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮಂಜಯ್ಯ ಹಿರೇಮಠ ಪ್ರಾರ್ಥನೆ ಹಾಡಿದರು. ಶಿಕ್ಷಕ ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿ, ವಂದಿಸಿದರು.
ಎಎಸ್‌ಐ ಎನ್.ಡಿ. ತಹಶಿಲ್ದಾರ್, ಪತ್ರಕರ್ತ ರಿಯಾಜ್ ದೊಡ್ಡಮನಿ, ಮೈಲಾರಪ್ಪ ಕೊರಚ, ಶಿವಪ್ಪ ಕೊರಚ, ದೊಡ್ಡಹನಮಪ್ಪ ಕೊರಚ, ಸಣ್ಣಮಾರಗೆಪ್ಪ ಕೊರಚ, ಹನಮಪ್ಪ ಕೊರಚ, ಗಂಗಪ್ಪ ಕೊರಚ, ಹನುಮಂತ ಕೊರಚ, ಮಲಕಪ್ಪ ಕೊರಚ, ಹನಮವ್ವ ಕೊರಚ, ದ್ಯಾಮಣ್ಣ ಕೊರಚ, ರಾಮಪ್ಪ ಕೊರಚ, ದೊಡ್ಡಯಲ್ಲಪ್ಪ ಕೊರಚ, ಹನಮಪ್ಪ, ಹನಮವ್ವ ಕೊರಚ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.