
ಸಾವು
(ಪ್ರಾತಿನಿಧಿಕ ಚಿತ್ರ)
ಗದಗ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಕೈ-ಕಾಲು ಕಟ್ಟಿ ಹಾಕಿ ಜಮೀನಿನ ಹೊಂಡದಲ್ಲಿ ಬಿಸಾಡಿ ಹೋಗಿರುವ ಘಟನೆ ತಾಲ್ಲೂಕಿನ ಕಣಗಿನಹಾಳ ಹೊರವಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಟಗೇರಿಯ ಹರಿಜನಕೇರಿಯ ಮಂಜುನಾಥ ರಾಮಣ್ಣ ಯಳವತ್ತಿ (45) ಮೃತ ವ್ಯಕ್ತಿ. ನ.7ರಂದು ಮನೆಯಿಂದ ಹೊರಗೆ ಹೋಗಿದ್ದ ಮಂಜುನಾಥ ಅವರು ಮನೆಗೆ ಹಿಂದಿರುಗಿರಲಿಲ್ಲ.
ದುಷ್ಕರ್ಮಿಗಳು ಮಂಜುನಾಥ ರಾಮಣ್ಣ ಯಳವತ್ತಿಯ ಕೈ-ಕಾಲು ಕಟ್ಟಿ ಕೊಲೆ ಮಾಡಿ, ಕಣಗಿನಹಾಳ ಹಾಗೂ ಹರ್ಲಾಪೂರ ಗ್ರಾಮದ ನಡುವಿನ ಈಶಪ್ಪ ಕುರಿ ಎಂಬುವರ ಜಮೀನಿನಲ್ಲಿ ಹೊಂಡದಲ್ಲಿ ಎಸೆದಿದ್ದಾರೆ. ಮಂಗಳವಾರ ಮಂಜುನಾಥನ ಶವ ಪತ್ತೆಯಾಗಿದ್ದು, ವ್ಯಕ್ತಿಯ ಮುಖದ ಭಾಗ ಹಾಗೂ ತಲೆಗೆ ಗಾಯವಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿವೈಎಸ್‌ಪಿ ಹಾಗೂ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.