ADVERTISEMENT

ಮಾಜಿ ಶಾಸಕ ಸಿ.ಎಸ್‌.ಮುತ್ತಿನಪೆಂಡಿಮಠ ನಿಧನ

​ಪ್ರಜಾವಾಣಿ ವಾರ್ತೆ
Published 29 ಮೇ 2019, 14:26 IST
Last Updated 29 ಮೇ 2019, 14:26 IST
ಸಿ.ಎಸ್‌. ಮುತ್ತಿನಪೆಂಡಿಮಠ
ಸಿ.ಎಸ್‌. ಮುತ್ತಿನಪೆಂಡಿಮಠ   

ಗದಗ: ಗದಗ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಚನ್ನವೀರಯ್ಯ ಶಾಂತಯ್ಯ ಮುತ್ತಿನಪೆಂಡಿಮಠ (90) ನಗರದಲ್ಲಿ ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

1978ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಕೆ.ಎಚ್‌.ಪಾಟೀಲ ಅವರನ್ನು ಮುತ್ತಿನಪೆಂಡಿಮಠ ಸೋಲಿಸಿದ್ದರು. 1983ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1989ರಲ್ಲಿ ಜನತಾದಳದಿಂದ ಕಣಕ್ಕಿಳಿದು ಕೆ.ಎಚ್‌ ಪಾಟೀಲ ವಿರುದ್ಧ ಹಾಗೂ 1999ರಲ್ಲಿ ಡಿ.ಆರ್‌ ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು.

1974ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರಾಗಿದ್ದರು. ಗದಗ ನಗರಕ್ಕೆ ತುಂಗಭದ್ರಾ ನದಿಮೂಲದಿಂದ ನೀರು ಪೂರೈಸುವ ಮೊದಲ ಹಂತದ ಕುಡಿಯುವ ನೀರಿನ ಯೋಜನೆ ಇವರು ಶಾಸಕರಾಗಿದ್ದ ಅವಧಿಯಲ್ಲಿ ಜಾರಿಯಾಗಿತ್ತು.

ADVERTISEMENT

ಅಂತ್ಯಕ್ರಿಯೆ ಗುರುವಾರ ಗದುಗಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.