ADVERTISEMENT

ನರೇಗಲ್:‌ ಜಿ.ಎಸ್.‌ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:37 IST
Last Updated 10 ಏಪ್ರಿಲ್ 2025, 13:37 IST
ನರೇಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಜಿ.ಎಸ್.‌ ಪಾಟೀಲ ಅವರ 78ನೇ ಜನ್ಮ ದಿನದ ಅಂಗಾವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್‌ ಹಾಗೂ ವಿತರಿಸಲಾಯಿತು
ನರೇಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಜಿ.ಎಸ್.‌ ಪಾಟೀಲ ಅವರ 78ನೇ ಜನ್ಮ ದಿನದ ಅಂಗಾವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್‌ ಹಾಗೂ ವಿತರಿಸಲಾಯಿತು   

ನರೇಗಲ್:‌ ರಾಜ್ಯ ಕಂಡ ಹಿರಿಯ ರಾಜಕಾರಣಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ರೋಣ ಶಾಸಕ ಜಿ.ಎಸ್.‌ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಎಚ್.‌ಅಬ್ಬಿಗೇರಿ ಆಗ್ರಹಿಸಿದರು.

ಶಾಸಕ ಜಿ.ಎಸ್.‌ ಪಾಟೀಲ ಅವರ 78ನೇ ಜನ್ಮ ದಿನದ ಅಂಗವಾಗಿ ಮಿಥುನ್‌ ಜಿ. ಪಾಟೀಲ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್‌ ಘಟಕದ ವತಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್‌ ವಿತರಣೆ ಮಾಡಿ ಮಾತನಾಡಿದರು.

‘ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯದೇ ಗೌರವಯುತ ರಾಜಕಾರಣ ಮಾಡುವ ಹಿರಿಯ ನಾಯಕರಿಗೆ ಪಕ್ಷವು ಮನ್ನಣೆ ನೀಡಬೇಕು. ಕ್ಷೇತ್ರದ ಜನರು ಅವರನ್ನು ಸಚಿವ ಸ್ಥಾನದಲ್ಲಿ ನೋಡಬೇಕು ಎಂಬ ಆಸೆಯನ್ನು ಬಹಳ ದಿನಗಳಿಂದ ಕಾಣುತ್ತಿದ್ದಾರೆ. ಇನ್ನಾದರು ಅವಕಾಶ ನೀಡಬೇಕು. ಇಲ್ಲವಾದಲ್ಲಿ, ಕ್ಷೇತ್ರದ ಜನರು ಹೋರಾಡುವುದು ಅನಿವಾರ್ಯ’ ಎಂದರು.

ADVERTISEMENT

ಕಾಂಗ್ರೆಸ್‌ ಪಕ್ಷದ ಮುಖಂಡರಾದ ಎಂ.ಎಸ್.‌ ಧಡೆಸೂರಮಠ, ವೀರನಗೌಡ ಪಾಟೀಲ, ಸಂತೋಷ ಹನಮಸಾಗರ, ಸದ್ದಾಂ ನಶೇಖಾನ್‌, ಗಿರೀಶ ಹೆಗ್ಗಡಿನ್ನಿ, ಅರುಣ ಕಾಮತ, ಮುತ್ತಣ್ಣ ಹಡಪದ, ಅರುಣ ಕಾಮತ, ಬಾದಷಾ ಹೂಲಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.