ADVERTISEMENT

ನರೇಗಲ್:‌ ವಿದ್ಯುತ್‌ ಕಂಬ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:19 IST
Last Updated 29 ಜನವರಿ 2026, 7:19 IST
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರಭಾರ ಶಾಖಾಧಿಕಾರಿ ಮರಿಯಪ್ಪ ಅಳವಂಡಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು

ನರೇಗಲ್:‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯಸ್ವಾಮಿ ದೇವಸ್ಥಾನದ ಮೇಲೆ ಹಾಯ್ದು ಹೋಗಿರುವ ವಿದ್ಯುತ್‌ ಕಂಬದ ಮುಖ್ಯ ತಂತಿಗಳಿಂದ ತೊಂದರೆಯಾಗುವ ಸಂಭವಿದೆ. ಆದ್ದರಿಂದ ಅದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಮಾರುತಿ ದೇವಸ್ಥಾನ ಟ್ರಸ್ಟ್‌ ಕಮೀಟಿ ವತಿಯಿಂದ ಸ್ಥಳೀಯ ಹೆಸ್ಕಾಂ ಇಲಾಖೆಯ ಪ್ರಭಾರ ಶಾಖಾಧಿಕಾರಿ ಮರಿಯಪ್ಪ ಅಳವಂಡಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಟ್ರಸ್ಟ್‌ ಕಮೀಟಿ ಅಧ್ಯಕ್ಷ ದಾದುಸಾಬ ನದಾಫ್, ಹಿಂದೂ-ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ಕಟ್ಟಿಸುತ್ತಿರುವ ಈ ದೇವಸ್ಥಾನದ ಕಟ್ಟಡ ಮೇಲೆಯೇ ತಂತಿಗಳಿವೆ. ಮುಂದೆ ಹಾಗೂ ಹಿಂದುಗಡೆ ಕಂಬಳಿರುವ ಕಾರಣ ಅವುಗಳನ್ನು ಸ್ಥಳಾಂತರಿಸಿ ರಸ್ತೆಯ ಕಡೆಗೆ ಯಾರಿಗೂ ತೊಂದರೆ ಆಗದಂತೆ ಹಾಕಬೇಕು. ಇಲ್ಲವಾದರೆ ದೇವಸ್ಥಾನದ ಕೆಲಸ ಮಾಡುವಾಗ ತೊಂದರೆ ಆಗುವ ಸಾಧ್ಯತೆಗಳಿವೆ ಆದ್ದರಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಸ್ಥಳಾಂತರದ ಕಾರ್ಯವನ್ನು ಮಾಡಬೇಕು. ಇಲ್ಲವಾದರೆ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿ, ಕಾಂಕ್ರೀಟ್‌ ಹಾಕುವ ಕಾಮಗಾರಿ ಅರ್ಧಕ್ಕೆ ನಿಲ್ಲಲಿದೆ. ಇಲಾಖೆಯ ಜೊತೆಗೆ ವಾರ್ಡ್‌ನ ಜನರು ಸಹಕಾರ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್‌ ಕಮೀಟಿಯ ವಿರೂಪಾಕ್ಷಯ್ಯ ಹಿರೇಮಠ, ಶರಣಪ್ಪ ಹಂಚಿನಾಳ, ಸದ್ದಾಂ ನಶೇಖಾನ್‌, ಪರಸಪ್ಪ ರಾಠೋಡ ಇದ್ದರು.

ADVERTISEMENT
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರಭಾರ ಶಾಖಾಧಿಕಾರಿ ಮರಿಯಪ್ಪ ಅಳವಂಡಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.