ADVERTISEMENT

ನರಗುಂದ| ಮುಂದಿನ ಪೀಳಿಗೆಗೆ ಸಂಸ್ಕಾರ ರೂಢಿಸಿ: ಶಾಸಕ ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:05 IST
Last Updated 2 ಮಾರ್ಚ್ 2026, 7:05 IST
ನರಗುಂದದಲ್ಲಿ ತಾಲ್ಲೂಕು ಆಡಳಿತ ಹಾಗೂ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ  ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮಸದಲ್ಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿದರು 
ನರಗುಂದದಲ್ಲಿ ತಾಲ್ಲೂಕು ಆಡಳಿತ ಹಾಗೂ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ  ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮಸದಲ್ಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿದರು    

ನರಗುಂದ: ‘ಜಂಗಮರು ಸರ್ವಜನಾಂಗದವರಿಗೆ ಸಂಸ್ಕಾರ ನೀಡಿ ಸುಧಾರಣೆ ಬಯಸಿದವರು. ಜಂಗಮರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಆರೂಢ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ, ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಜಂಗಮ ಸಮಾಜದ ಕೊಡುಗೆ ಅಪಾರ. ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಅಶಾಂತಿ ಹೆಚ್ಚಾಗಲಿದೆ. ಪ್ರತಿಯೊಬ್ಬರೂ ರೇಣುಕಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಾತನಾಡಿ, ‘ಜಂಗಮರು ಸಮಾಜಕ್ಕೆ ಲಿಂಗಧಾರಣೆ ಮಹತ್ವ ತಿಳಿಸಬೇಕು’ ಎಂದರು.

ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರು, ‘ರೇಣುಕಾಚಾರ್ಯರು ಮನಕುಲಕ್ಕೆ ಸಂಸ್ಕಾರ, ಧರ್ಮವನ್ನು ರೂಡಿಸಿದರು. ಸರ್ಕಾರ ಮಾಡದ ಜನಸೇವೆಯನ್ನು ಮಠಗಳು ನಡೆಸುತ್ತಿವೆ’ ಎಂದು ತಿಳಿಸಿದರು.

ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ‘ಮಹಾನ್ ಪುರುಷರ ಜಯಂತಿಗಳು ಆಚರಣೆಗೆ ಸಿಮೀತವಾಗದೇ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.

ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಬಾಬಾಸಾಹೇಬರ ಅರಮನೆ ಆವರಣದಿಂದ ಸಕಲ ವಾಧ್ಯಮೇಳದೊಂದಿಗೆ ಆರಂಭವಾಗಿ ಆರೂಢ ಜ್ಯೋತಿ ಭವನ ತಲುಪಿತು.

ದೀಪಾ ಗವಿಮಠ ಉಪನ್ಯಾಸ ನೀಡಿದರು. ನಂದೀಶ ಮಠದ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಕೊಣ್ಣೂರ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಬನಹಟ್ಟಿಯ ಸೊಲಬಯ್ಯ ಸ್ವಾಮೀಜಿ, ಬಿಇಒ ಎಚ್.ಎಂ. ಕಂಬಳಿ, ಎನ್.ಆರ್. ನೀಡಗುಂದಿ, ಆನಂದ ಬನಪ್ಪನವರ ಇದ್ದರು. ಗಿರೀಶ ದಾಸರ ನಿರೂಪಿಸಿ, ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.