ಶಿರಹಟ್ಟಿ: ‘ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿಯ ಬದುಕೇ ಒಂದು ಮಹಾಕಾವ್ಯ’ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎ.ಬಳಿಗೇರ ಹೇಳಿದರು.
ಸ್ಥಳೀಯ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಲೋಕದ ಎಲ್ಲ ಕ್ರಿಯೆಗಳಿಗೆ ಸೂರ್ಯನೇ ಕೇಂದ್ರಬಿಂದು. ಸೂರ್ಯನ ಉದಯವು ಜಗದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ’ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ‘ವೈರಾಗ್ಯಕ್ಕೆ ಮತ್ತೊಂದು ಹೆಸರೇ ಅಕ್ಕಮಹಾದೇವಿ. ಅವರು ಪರಮಾರ್ಥ ಸುಖವೇ ನಿಜವಾದ ಸುಖವೆಂದು ಸಾಧಿಸಿದ ಮಹಾನ್ ಮಹಿಳೆಯಾಗಿದ್ದಾಳೆ’ ಎಂದರು.
ಚಂದ್ರಕಾಂತ ನೂರಶೆಟ್ಟರ, ಎಚ್.ಎಂ.ದೇವಗಿರಿ, ಎಂ.ಎಚ್.ಪಲ್ಲೇದ, ಪ್ರಭು ಹಲಸೂರ, ಬಸವರಾಜ ಬೋರಶೆಟ್ಟರ, ನಂದಾ ಕಪ್ಪತ್ತನವರ, ಶಾಂತಕ್ಕ ಪಾಟೀಲ, ರೇಣುಕಾ ಜಗಂಡಭಾವಿ, ಕಪ್ಪಣ್ಣವರ, ಸಜ್ಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.