ಅಮಾನತು
ಗದಗ: ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ ಸೌಲಭ್ಯಗಳನ್ನು ಅನರ್ಹರಿಗೆ ಕಲ್ಪಿಸಿ ಆರೋಪದ ಮೇಲೆ ಗದಗ ತಾಲ್ಲೂಕು ಕಚೇರಿಯ ಉಪತಹಶೀಲ್ದಾರ್ ಡಿ.ಟಿ.ವಾಲ್ಮೀಕಿ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಆದೇಶ ಹೊರಡಿಸಿದ್ದಾರೆ.
‘ದೂರು ಆಧರಿಸಿ ಪರಿಶೀಲಿಸಿದಾಗ, ಉಪ ತಹಶೀಲ್ದಾರ್ ಅವರಿಂದ ಕರ್ತವ್ಯಲೋಪ ಆಗಿದ್ದು, ಜಿಲ್ಲೆಯಲ್ಲಿ 17,997 ಮಂದಿ ಅನರ್ಹರಿಗೆ ಸೌಲಭ್ಯ ತಲುಪಿದೆ ಎಂಬುದು ಪತ್ತೆ ಆಗಿದೆ. ತನಿಖೆಗೆ ಆದೇಶಿಸಲಾಗಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.