ADVERTISEMENT

ಜ.4,5 ಮತ್ತು 6ರಂದು ಪುಲಿಗೆರೆ ಉತ್ಸವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:53 IST
Last Updated 19 ಡಿಸೆಂಬರ್ 2018, 12:53 IST
ಪುಲಿಗೆರೆ ಉತ್ಸವದ ಪೂರ್ವಭಾವಿ ಸಭೆ ಬುಧವಾರ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯಿತು
ಪುಲಿಗೆರೆ ಉತ್ಸವದ ಪೂರ್ವಭಾವಿ ಸಭೆ ಬುಧವಾರ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯಿತು   

ಲಕ್ಷ್ಮೇಶ್ವರ: ಇನ್ಫೊಸಿಸ್‌ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ಪುಲಿಗೆರೆ ಉತ್ಸವ ಜ.4, 5 ಮತ್ತು 6ರಂದು ಮೂರು ದಿನ ನಡೆಯಲಿದೆ.

ಬುಧವಾರ ಇಲ್ಲಿ, ಉತ್ಸವ ಪೂರ್ವಭಾವಿ ಸಭೆಯ ಬಳಿಕ, ಭಾರತೀಯ ವಿದ್ಯಾಭವನದ ಅಧಿಕಾರಿ ಸಿ.ಎನ್. ಅಶೋಖಕುಮಾರ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

‘2016ರಿಂದ ಲಕ್ಷ್ಮೇಶ್ವರದಲ್ಲಿ ಪುಲಿಗೆರೆ ಉತ್ಸವ ಆಚರಿಸಲಾಗುತ್ತಿದೆ.ಈ ಬಾರಿ ಇನ್ಫೊಸಿಸ್‌ ಸಿಇಒ ಅನಂತ ರಾಧಾಕೃಷ್ಣನ್ ಅವರು ಉತ್ಸವಕ್ಕೆ ಚಾಲನೆ ನೀಡುವರು. ಮೂರು ದಿನಗಳು ಪ್ರಾತಃಕಾಲ ಮತ್ತು ಸಂಜೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು’ ನಡೆಯಲಿವೆ ಎಂದರು.

ADVERTISEMENT

‘ಜ.2ರಂದು ಉತ್ತರ ಕರ್ನಾಟಕದ ಕುಂಚ ಕಲಾವಿದರಿಂದ ಕಲಾಶಿಬಿರ ನಡೆಯಲಿದೆ.ಸೋಮೇಶ್ವರ ದೇವಸ್ಥಾನದ ಟ್ರಸ್ಟ್ ಸಮಿತಿ ಅಧ್ಯಕ್ಷ ಶಿವಣ್ಣ ನೆಲವಗಿ ಶಿಬಿರ ಉದ್ಘಾಟಿಸುವರು’ ಎಂದರು.

ಸಮಿತಿ ಕಾರ್ಯದರ್ಶಿ ಪೂರ್ಣಾಜಿ ಖರಾಟೆ, ಸೋಮಣ್ಣ ಮುಳಗುಂದ, ನಾಗರಾಜ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಕಿರಣ ನವಲೆ, ಸುರೇಶ ರಾಚನಾಯ್ಕರ್, ಬಸಣ್ಣ ಮೆಣಸಿನಕಾಯಿ, ಬಿ.ಎಸ್. ಬಾಳೇಶ್ವರಮಠ. ಎಚ್.ಎಸ್. ರಾಜಶೇಖರ, ಶಿವಾನಮದ ಲಿಂಗಶೆಟ್ಟಿ, ಮಾಲಾದೇವಿ ದಂಧರಗಿ, ಮಾಲಾ ಗೋಗಿ, ಗೀತಾ ಮಾನ್ವಿ, ಪಾರ್ವತಿ ಕಳ್ಳಿಮಠ, ಶೈಲಾ ಆದಿ, ದೀಪಿಕಾ ಮಾನ್ವಿ, ದಿವ್ಯಾ ಮಾನ್ವಿ, ಮಂಜುಳಾ ಸತ್ಯಪ್ಪನವರ, ಎಚ್.ಎನ್. ಹಾವೇರಿ, ರುದ್ರಪ್ಪ ನರೇಗಲ್ಲ, ನೀಲಪ್ಪ ಕೆರ್ಜೆಕಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.