ADVERTISEMENT

ಲಕ್ಕುಂಡಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 14:06 IST
Last Updated 27 ಜನವರಿ 2025, 14:06 IST
ಲಕ್ಕುಂಡಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವದಂಗವಾಗಿ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದೇಶ ಭಕ್ತಿ ಗೀತೆಯ ನೃತ್ಯ ಗಮನ ಸೆಳೆಯಿತು
ಲಕ್ಕುಂಡಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವದಂಗವಾಗಿ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದೇಶ ಭಕ್ತಿ ಗೀತೆಯ ನೃತ್ಯ ಗಮನ ಸೆಳೆಯಿತು    

ಲಕ್ಕುಂಡಿ: ಇಲ್ಲಿಯ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧ ಶಾಲಾ, ಕಾಲೇಜಗಳಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮ ಪಂಚಾಯಿತಿಯ ಧ್ವಜಾರೋಹಣವನ್ನು ಉಪಾಧ್ಯಕ್ಷೆ ಪುಷ್ಪಾ ಪಾಟೀಲ ನೆರವೇರಿಸಿದರು. ಇದಕ್ಕೂ ಪೂರ್ವ ಗಾಂಧೀಜಿ, ಹಾಗೂ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಎಂ.ಕೆ.ಬಿ.ಎಸ್, ಕೆ.ಜಿ.ಎಸ್, ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಿ.ಡಿ.ಒ ಅಮೀರನಾಯಕ, ಕಾರ್ಯದರ್ಶಿ ಪ್ರದೀಪ ಆಲೂರ, ಎಸ್.ಡಿ.ಎ ತುಕಾರಾಮ ಹುಲಗಣ್ಣವರ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು.

ADVERTISEMENT

ಬಾಲಕಿಯರ ಸರ್ಕಾರಿ ಪ್ರೌಢಶಾಲೆ: ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಕುಂಬಾರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ವೈ.ಎಚ್.ತೆಕ್ಕಲಕೋಟೆ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಶೋಭಾ ಮಲ್ಲಾಡದ, ಎಸ್.ಡಿ.ಎಂ.ಸಿ ಸದಸ್ಯರು. ಶಿಕ್ಷಕರು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಎಂ.ಕೆ.ಬಿ.ಎಸ್: ಇಲ್ಲಿಯ ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ ನೆರವೇರಿಸಿದರು. ಸಿ.ಆರ್.ಪಿ ಜೆ.ಟಿ.ಮೀರಾನಾಯಕ, ಪ್ರಧಾನ ಶಿಕ್ಷಕ ಸುರೇಶ ಹುಬ್ಬಳ್ಳಿ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಶಿಕ್ಷಕ ವೃಂದ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸ್ವಾಮಿ ವಿವೇಕಾನಂದ ಶಾಲೆ: ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಶಾಲಾ ಉಸ್ತುವಾರಿ ಸಮಿತಿ ಸದಸ್ಯ ರಾಮಣ್ಣ ಅಂಬಕ್ಕಿ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮುಖ್ಯ ಶಿಕ್ಷಕ ಎಂ.ಎಸ್.ಬೇಲೇರಿ, ಜಿ.ವೈ.ದಾಸರ, ವೈಸಿ.ಕದಡಿ, ದೈಹಿಕ ಶಿಕ್ಷಣ ಶಿಕ್ಷಕ ಎನ್.ಕೆ.ಅಂಬಕ್ಕಿ, ಪಿ.ಎಸ್.ಅಂಗಡಿ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾಂತಮ್ಮ ನಂದಪ್ಪನವರ ಇದ್ದರು.

ಕೆ.ಜಿ.ಎಸ್: ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಖಂಡು ಧ್ವಜಾರೋಹಣ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ರಾ. ಪಂ ಸದಸ್ಯರಾದ ರಜೀಯಾಬೇಗಂ ತಹಶೀಲ್ದಾರ, ಅನ್ನಪೂರ್ಣ ರಿತ್ತಿ, ಪಕ್ಕೀರಮ್ಮ ಬೇಲೇರಿ, ಚಂದ್ರವ್ವ ರಿತ್ತಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸಿದ್ದಮ್ಮ ಸಜ್ಜನರ, ಮುಖ್ಯೋಪಾಧ್ಯಾಯ ಎಸ್.ಎಸ್.ಕಂಬಳಿ, ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು.

ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ: ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಎಂ.ಹುಬ್ಬಳ್ಳಿ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮರಿಯಪ್ಪ ವಡ್ಡರ ನೆರವೇರಿಸಿದರು. ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಗ್ರಾ. ಪಂ ಸದಸ್ಯರಾದ ವೀರಣ್ಣ ಚಕ್ರಸಾಲಿ, ಬಸವರಾಜ ಯಲಿಶಿರುಂಜ, ಮಹಾಂತೇಶ ಕಮತರ, ಹನುಮಂತಪ್ಪ ಬಂಗಾರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಶಿಗ್ಲಿ, ನಿರ್ಮಲಾ ಅಜಿನಾಳ, ರೇಖಾ ಬೊರಟ್ಟಿ, ಹನುಮಂತಪ್ಪ ಕಟಿಗ್ಗಾರ, ರತ್ನಾ ಮಲ್ಲಾಪೂರ, ಯಲ್ಲಪ್ಪ ಉಮಚಗಿ, ಪ್ರಧಾನ ಗುರುಮಾತೆ ಎಸ್.ಜಿ ಕಂಠಿ , ಎಸ್.ಎಸ್.ಅಂಕದ, ಎಸ್.ಕೆ. ಬಳಿಗಾರ, ಎಸ್.ಕೆ.ವನಹಳ್ಳಿ, ಜೆ.ಆರ್.ಕುಲಕರ್ಣಿ ಇದ್ದರು.

ಡಿ.ಪಿ.ಇ.ಪಿ ಶಾಲೆ: ಇಲ್ಲಿಯ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಿ.ಪಿ.ಇ.ಪಿ) ಶಾಲೆಯ ಧ್ವಜಾರೋಹಣವನ್ನು ಮಹಾಂತೇಶ ಗುರಿಕಾರ ನೆರವೇರಿಸಿದರು. ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಶ್ರೀಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಶಿವಪ್ಪ ಬಳಿಗೇರ, ಶಾಂತಮ್ಮ ಮಣಕವಾಡ, ಎಸ್.ಡಿ.ಎಂ.ಸಿ ಸದಸ್ಯರು ಇದ್ದರು. ಮುಖ್ಯಶಿಕ್ಷಕ ಕೆ.ಬಿ.ಕೊಣ್ಣುರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಕೆ.ವಿ ನಿರೂಪಿಸಿದರು. ಮಹಾಲಕ್ಷ್ಮೀ ದೊಡ್ಡಮನಿ ವಂದಿಸಿದರು.

ಜನತಾ ವಿದ್ಯಾವರ್ಧಕ ಸಂಸ್ಥೆ: ಇಲ್ಲಿಯ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್.ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಕುಂಬಾರ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ತಿಪ್ಪಣ್ಣ ಅಂಬಕ್ಕಿ, ಕೆ.ಎನ್.ಪಾಟೀಲ, ವೀರಯ್ಯ ಗಂಧದ, ಶಾಂತಮ್ಮ ಬೊರಟ್ಟಿ, ಪ್ರಾಚಾರ್ಯ ಬಿ.ವಿ.ಪಾಟೀಲ, ಪ್ರೌಢಶಾಲೆ ಹಿರಿಯ ಶಿಕ್ಷಕ ಎ.ಎನ್.ಪೂಜಾರ ಸಂಸ್ಥೆಯ ನಿರ್ದೆಶಕರು, ಶಿಕ್ಷಕ ಬಳಗ ಹಾಜರಿದ್ದರು.

ಅಂಬೇಡ್ಕರ್‌ ನಗರ: ಧ್ವಜಾರೋಹಣವನ್ನು ಯುವ ಧುರೀಣ ನಿಂಗಪ್ಪ ದೊಡ್ಡಮನಿ ನೆರವೇರಿಸಿದರು. ಭರಮಪ್ಪ ಮುಳ್ಳಾಳ, ಹನುಮಂತಪ್ಪ ಸೋಮನಕಟ್ಟಿ, ಮಂಜಪ್ಪ ಸೋಮನಕಟ್ಟಿ, ಬಿ.ಐ. ಮುಳ್ಳಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.