ಮುಳಗುಂದ: ಸಮೀಪದ ಬಸಾಪುರ ಶಿರಹಟ್ಟಿ ಮಧ್ಯದ ರಸ್ತೆ ಹಾಳಾಗಿದ್ದು, ಬಸಾಪೂರ ಗ್ರಾಮಸ್ಥರು ಭಾನುವಾರ ದುರಸ್ತಿ ಕಾಮಗಾರಿ ಕೈಗೊಂಡರು.
‘ಮಳೆ ಆರಂಭದಿಂದ ಕಂದಕ ಉಂಟಾಗಿ, ವಾಹನ, ಸವಾರರಿಗೆ ತೊಂದರೆಯಾಗುತ್ತಿತ್ತು. ಹಲವು ಭಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು. ಕಾರಣ ನಾವೆಲ್ಲರೂ ಸೇರಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದೇವೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಮುದುಕಪ್ಪ ಕವಲೂರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.