ADVERTISEMENT

ನಿಯಮ ಪಾಲಿಸದ ಜನ: ಬೆನ್ನಟ್ಟಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಮೇ 2021, 3:35 IST
Last Updated 8 ಮೇ 2021, 3:35 IST
ನರಗುಂದದ ಶಿವಾಜಿ ವೃತ್ತದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು
ನರಗುಂದದ ಶಿವಾಜಿ ವೃತ್ತದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು   

ನರಗುಂದ: ಪಟ್ಟಣದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಆದರೂ ನಿಯಮಗಳನ್ನು ಜನತೆ ಪಾಲಿಸದೇ ಇರುವುದು ಶುಕ್ರವಾರ ಕಂಡು ಬಂತು. ಬೆಳಿಗ್ಗೆ 10 ಗಂಟಯ ವರೆಗೆ ಅಂಗಡಿ ತೆರೆಯಲು, ಜನ ಸಂಚಾರಕ್ಕೆ ಅವಕಾಶವಿದೆ. ಈ ಸಮಯದ ನಂತರವೂ ಜನರ ಸಂಚಾರ ಸಾಮಾನ್ಯವಾಗಿತ್ತು. ಇದನ್ನು ಕಂಡ ಪೊಲೀಸರು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ಹಾಗೂ ಅಲ್ಲಲ್ಲಿ ಬೀಡು ಬಿಟ್ಟಿದ್ದ ಜನರು ಬೆನ್ನಟ್ಟಿ ಭಾರಿಸಿದರು.

ಅನಗತ್ಯವಾಗಿ ಸಂಚರಿಸುವ ಬೈಕ್‍ಗಳನ್ನು ವಶಪಡಿಸಿಕೊಂಡರು. ಕೆಲವು ಅಂಗಡಿಗಳು 10 ಗಂಟೆ ನಂತರವೂ ತೆರೆದಿದ್ದರಿದ ಸ್ವತ: ಪೊಲೀಸರೆ ಬಂದು ಕದ ಹಾಕಿಸಿ ಬೀಗದ ಕೈ ತೆಗೆದುಕೊಳ್ಳಲು ಮುಂದಾಗಿದ್ದನ್ನು ನೋಡಿದ, ಉಳಿದ ಅಂಗಡಿಯವರು ದಿಢೀರನೆ ಬಾಗಿಲು ಮುಚ್ಚಿದರು.

ನಿಯಮ ಅಷ್ಟಕ್ಕಷ್ಟೇ: ಬೆಳಿಗ್ಗೆ 10 ಗಂಟೆಯ ವರೆಗೆ ಗುಂಪಾಗಿ ಸೇರದೆ ಮಾಸ್ಕ್ ಧರಸಿಕೊಂಡು ಸಂಚರಿಸಬೇಕು, ವ್ಯಾಪಾರ ನಡೆಸಬೇಕೆಂದು ನಿಯಮವಿದ್ದರೂ ಇದನ್ನು ಜನರು ಲೆಕ್ಕಿಸುತ್ತಿಲ್ಲ. ಕೆಲವೆಡೆ ಪೊಲೀಸರು, ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದರು.

ADVERTISEMENT

ಶಿವಾಜಿವೃತ್ತದಲ್ಲಿ ವಾಹನ ಸಂಚಾರ ಸಾಮಾನ್ಯವಾಗಿತ್ತು. ಪೊಲೀಸರು ಕೆಲಸ ಹೊತ್ತು ವಾಹನ ತಡೆದು ಪ್ರಶ್ನಿಸಿದರು, ಆ ನಂತರ ಸುಮ್ಮನಾದರು. ಮಧ್ಯಾಹದ ಹೊತ್ತಿಗೆ ಪಟ್ಟಣ ಬಿಕೋ ಎಂದರೆ ಗಲ್ಲಿಗಳಲ್ಲಿ ಜನ ಸಂಚಾರ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.