ಗದಗ: ರಾಜ್ಯ ಸರ್ಕಾರದ ಎಲ್ಲ ನೌಕರರಿಗೆ ಎನ್‌ಪಿಎಸ್‌ನಿಂದ ಹಲವಾರು ಸಮಸ್ಯೆಗಳಿವೆ. ಆದರೂ ಸಹ ಸರ್ಕಾರ ಒಪಿಎಸ್ ಜಾರಿಗಾಗಿ ಸಮಿತಿ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಅಧ್ಯಯನಕ್ಕೆ ಕಳುಹಿಸಲಾಗಿದೆ. ಆದರೆ, ಇಲ್ಲಿಯವರೆಗೂ ಎಲ್ಲಿಯೂ ಅಧ್ಯಯನದ ಕಾರ್ಯ ನಡೆದಿಲ್ಲ. ಕೇವಲ ನೌಕರರಿಗೆ ಸಮಾಧಾನಕ್ಕಾಗಿ ಸಮಿತಿ ರಚಿಸಿದ್ದಾರೆ. ನೌಕರರಿಗೆ ನಿವೃತ್ತಿ ನಂತರ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಒಪಿಎಸ್ ಜಾರಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಸದನ ಚುಕ್ಕೆಗುರುತಿನ ಪ್ರಶ್ನೆ ವೇಳೆಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ನೌಕರರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ಅನುಷ್ಟಾನಗೊಳಿಸಲು ಸರ್ಕಾರ ಆದೇಶವನ್ನು ಮಾತ್ರ ಮಾಡಿದೆ. ಇದರ ಸದುಪಯೋಗ ನೌಕರರಿಗೆ ಯಾವಾಗ ಸಿಗುತ್ತದೆ? ರಾಜ್ಯದಲ್ಲಿ 2.5 ಲಕ್ಷ ನೌಕರರ ಕೊರತೆ ಇದ್ದರೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡಲು ಶ್ರಮಿಸುತ್ತಿದ್ದಾರೆ. ನೌಕರರ ಕಾಳಜಿ ಮಾಡುವುದು ಸಹ ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಹೊರಡಿಸಿದ ಆದೇಶವನ್ನು ಅನುಷ್ಟಾನ ಮಾಡಿ ನೌಕರರ ಉಚಿತ ಆರೋಗ್ಯ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.