ಲಕ್ಷ್ಮೇಶ್ವರ: ‘ಪರಿಶಿಷ್ಟ ಪಂಗಡಕ್ಕೆ ಅನ್ಯ ಜಾತಿ ಸೇರಿಸಬಾರದು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿದೋದ್ದೇಶಗಳ ಸಂಘದ ಅಧ್ಯಕ್ಷ ಭೀಮಣ್ಣ ಯಂಗಾಡಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಮುಖಂಡ ಪ್ರಕಾಶ ಬೆಂತೂರ ಮಾತನಾಡಿ, ‘ಈಗಾಗಲೇ ಪರಿಶಿಷ್ಟ ಪಂಗಡದಲ್ಲಿ ಸರ್ಕಾರ ಅನೇಕ ಜಾತಿಗಳನ್ನು ಸೇರಿಸಿ ಎಸ್‍ಟಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಕಾರಣ ಅನ್ಯ ಜಾತಿಯವರು ಪಡೆದುಕೊಂಡಿರುವ ನಕಲಿ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವವನ್ನು ರದ್ದುಪಡಿಸಬೇಕು. ಅನ್ಯ ಜಾತಿಯನ್ನು ಎಸ್‍ಟಿ ಪಟ್ಟಿಗೆ ಸೇರಿಸಬಾರದು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಯಂಗಾಡಿ, ಎನ್.ಎನ್. ನೆಗಳೂರ, ಕೆ.ಒ. ಹೂಲಿಕಟ್ಟಿ, ಕಲ್ಲಪ್ಪ ಗಂಗಣ್ಣವರ, ಬಸಣ್ಣ ಕೊಂಡಿಕೊಪ್ಪ, ರಾಜಶೇಖರ ಮೇಲ್ಮುರಿ, ಚಂದ್ರು ತಳವಾರ, ಹನಮಂತ ಜಾಲಿಮರದ, ನಾಗರಾಜ ಹಾವಳಕೇರಿ, ಚೆನ್ನಬಸಪ್ಪ ಬೆಡಸೂರ, ರಮೇಶ ಕೊಂಡಿಕೊಪ್ಪ, ಶಿವರಾಜ ಪಶುಪತಿಹಾಳ, ಮುತ್ತು ಕೋಳಿವಾಡ, ಕುಮಾರ ಗೋವನಾಳ, ಗಂಗಾಧರ, ಫಕ್ಕೀರೇಶ ಕಲ್ಲೂರ, ರಮೇಶ ಶಿವಳ್ಳಿ, ಶಿವಪುತ್ರಪ್ಪ ತಾರಿಕೊಪ್ಪ, ಬಸವರಾಜ ಶೆಟ್ಟಿಕೇರಿ, ಸೋಮು ಬಟ್ಟೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.